ಹಿಂದೂ ಎಂದು ನಂಬಿಸಿ ಯುವತಿಯನ್ನು ಮದುವೆಯಾದ ಮುಸ್ಲಿಂ ಯುವಕ: ಲವ್ ಜಿಹಾದ್ ಗೆ ಯತ್ನಿಸಿದ ಆರೋಪಿ ಅರೆಸ್ಟ್
Sunday, October 24, 2021
ನಗಾಂವ್ (ಅಸ್ಸಾಂ): ಪ್ರೇಮದ ಹೆಸರಿನಲ್ಲಿ ಹಿಂದೂ ಯುವತಿಯರ ತಲೆಗೆಡಿಸಿ ಮದುವೆಯ ನೆಪವೊಡ್ಡಿ ಮತಾಂತರ ಮಾಡುತ್ತಿರುವ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿದೆ ಎಂದು ಹಿಂದೂ ಕಾರ್ಯಕರ್ತರು ಕೂಗು ಎಬ್ಬಿಸುತ್ತಿರುವ ಬೆನ್ನಲ್ಲೇ ಅಂಥಹದ್ದೇ ಒಂದು ಪ್ರಕರಣ ಅಸ್ಸಾಂನಲ್ಲಿ ನಡೆದಿದೆ.
ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿದ್ದಾನೆ. ಈ ಸಂದರ್ಭ ಆಕೆಯಲ್ಲಿ ತಾನು ಹಿಂದೂ ಯುವಕನೆಂದೇ ನಂಬಿಸಿದ್ದಾನೆ. ಬಳಿಕ ಆಕೆಯನ್ನು ವಿವಾಹವಾಗಿ ನೀಡಬಾರದ ಚಿತ್ರಹಿಂಸೆ ನೀಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಮದುವೆಯಾದ ಬಳಿಕ ಆತನ ಅಸಲಿಯತ್ತು ಯುವತಿಗೆ ತಿಳಿದು ಬಂದು. ಅದು ಗೊತ್ತಾಗುತ್ತಲೇ ಆರೋಪಿ ಆಕೆಯ ಕೊಲೆಗೂ ಯತ್ನಿಸಿದ್ದಾನೆ. ಈತನ ಹಿಂಸೆ ತಾಳಲಾರದೆ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಆಗಲೇ ಈ ಪ್ರಕರಣ ಬೆಳಕಿಗೆ ಬಂದಿದೆ.
ಯುವತಿ ಅಸ್ಸಾಂ ರಾಜ್ಯದ ದೀಮಾಜಿ ಜಿಲ್ಲೆಯವಳು. ಆರೋಪಿಯೂ ಅಸ್ಸಾಂನ ಲಂಬ್ಡಿಂಗ್ ಜಿಲ್ಲೆ ನಿವಾಸಿ. ಇವರಿಬ್ಬರೂ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭ ಇಬ್ಬರಿಗೂ ಪರಿಚಯವಾಗಿದೆ. ಆರೋಪಿ ಮಾತ್ರ ಆಕೆಯನ್ನು ಮದುವೆಯಾಗಿ ಮತಾಂತರಗೊಳಿಸುವ ದುರುದ್ದೇಶದಿಂದ ತನ್ನನ್ನು ಹಿಂದೂ ಧರ್ಮದವನು ಎಂದು ಪರಿಚಯಿಸಿಕೊಂಡಿದ್ದಾನೆ. ಜೊತೆಗೆ ಹಿಂದೂ ಹೆಸರನ್ನೇ ಹೇಳಿಕೊಂಡಿದ್ದಾನೆ.
ಸ್ನೇಹವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡ ಆರೋಪಿ ಯುವತಿಯ ಜತೆ ಸಲುಗೆ ಬೆಳೆಸಿ ಪ್ರೀತಿಯ ನಾಟಕವಾಡಿ ಮದುವೆಯಾಗಲೂ ಒಪ್ಪಿಸಿದ್ದಾನೆ. ಇಬ್ಬರೂ ಮದುವೆಯಾಗಿದ್ದಾರೆ. ಆ ಬಳಿಕ ಆತನ ವರಸೆ ಬದಲಾಗತೊಡಗಿತು. ಜೊತೆಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲು ಶುರು ಮಾಡಿದ್ದಾನೆ.
ಕೆಲ ಸಮಯದ ಬಳಿಕ ಯುವತಿಗೆ ತನ್ನ ಪತಿ ಮುಸ್ಲಿಂ ಎಂಬ ಸತ್ಯ ಗೊತ್ತಾಗಿದೆ. ಈ ಅಸಲಿಯತ್ತು ತಿಳಿದ ಬಳಿಕ ಆತನ ಹಿಂಸೆ ಇನ್ನಷ್ಟು ಕ್ರೂರವಾಗಿದೆ. ಪತ್ನಿ ತನ್ನ ವಿರುದ್ಧ ಹೋಗುತ್ತಿದ್ದಾಳೆ ಎಂದು ತಿಳಿಯುತ್ತಲೇ ಆಕೆಯ ಬಳಿಯಿದ್ದ ಚಿನ್ನಾಭರಣ ದೋಚಿ ಆರೋಪಿ ಪರಾರಿಯಾಗಿದ್ದಾನೆ.
ಬಳಿಕ ಯುವತಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆದು ಪೊಲೀಸರಿಗೆ ದೂರು ನೀಡಿದ್ದಾಳೆ. ಈ ದೂರಿನನ್ವಯ ಅಸ್ಸಾಂ ಹೋಜಾಯ್ ಜಿಲ್ಲೆಯಲ್ಲಿ ಸದ್ಯ ಯುಕನನ್ನು ಬಂಧಿಸಲಾಗಿದೆ ಎಂದು ಲಂಬ್ಡಿಂಗ್ ಠಾಣಾಧಿಕಾರಿ ಎಸ್.ಕೆ.ಶರ್ಮಾ ಮಾಹಿತಿ ನೀಡಿದ್ದಾರೆ. ಕೂಡಲೇ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತನ ಮೇಲೆ ಲವ್ ಜಿಹಾದ್ ಪ್ರಕರಣ ದಾಖಲಾಗಿದೆ.