Mangalore-ಭೂಗತ ಪಾತಕಿಯೊಂದಿಗಿನ ನಂಟು- ಆರೋಪಿಯನ್ನು ಬಂಧಿಸುವ ವೇಳೆ ಪರಾರಿಗೆ ಯತ್ನ- ಕೊನೆಗೂ ಬಲೆ ಬೀಸಿದ ಕುಡ್ಲ ಪೊಲೀಸರು
Monday, November 1, 2021
ಮಂಗಳೂರು; ಭೂಗತ ಪಾತಕಿಯೊಂದಿಗೆ ನಂಟು ಹೊಂದಿದ ಮೂಡಬಿದ್ರೆಯ ಆರೋಪಿಯೊಬ್ಬನನ್ನು ಮೂಡಬಿದ್ರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಡಬಿದ್ರೆ ಪೊಲೀಸ್ ಠಾಣೆ ಸರಹದ್ದಿನ ಕೊಟೆಬಾಗಿಲು ನಿವಾಸಿ ಪ್ರವೀಣ್ ಕುಮಾರ್, 46 ವರ್ಷ ಎಂಬಾತ ಬಂಧಿತ ಆರೋಪಿ. ಕ್ರಿಮಿನಲ್ ಪ್ರಕರಣ ಒಂದರಲ್ಲಿ ಈತ ಮುಂಬಯಿ ಪೊಲೀಸರಿಗೆ ಬೇಕಾಗಿದ್ದು ತಲೆಮರೆಸಿಕೊಂಡಿದ್ದ .
ಈತ ಭೂಗತ ಪಾತಕಿಗಳೊಂದಿಗೆ ನಂಟು ಹೊಂದಿರುವ ಹಾಗೂ ತನ್ನೊಂದಿಗೆ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿರುವ ಸಾದ್ಯತೆಗಳು ಇರುವ ಬಗ್ಗೆ ಮಾಹಿತಿ ಪೊಲೀಸರಲ್ಲಿ ಇತ್ತು. ನಿನ್ನೆ ಈತನು ತನ್ನ ಮನೆಗೆ ಬಂದಿರುವ ಮಾಹಿತಿ ಬಂದ ಮೇರೆಗೆ, ಆತನನ್ನು ವಿಚಾರಣೆಗಾಗಿ ಠಾಣೆಗೆ ಕರೆತರುವ ಸಲುವಾಗಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ಆರೋಪಿಯ ಮನೆಯ ಬಳಿ ಹೋದಾಗ ಸಮವಸ್ತ್ರ ದಲ್ಲಿದ್ದ ಸಿಬ್ಬಂದಿಗಳನ್ನು ನೋಡಿ ಆತನು ಓಡಿಹೋಗಲು ಪ್ರಯತ್ನ ಪಟ್ಟಿದ್ದಾನೆ.
ಆಗ ಆತನನ್ನು ಹಿಡಿಯಲು ಹೋದಾಗ ಆರೋಪಿಯು ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಪಿಸಿ 617 ರವರನ್ನು ಜೋರಾಗಿ ಕೈ ಯಿಂದ ತಳ್ಳಿ ನೆಲಕ್ಕೆ ಬೀಳಿಸಿ ನೋವುಂಟು ಮಾಡಿದ್ದಾನೆ. ನಂತರ ಸಿಬ್ಬಂದಿಗಳು ಆತನನ್ನು ಬೆನ್ನಟ್ಟಿ ಹಿಡಿದು ಠಾಣೆಗೆ ಕರೆತಂದಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಆತನ ಮೇಲೆ ಪ್ರಕರಣವನ್ನು ದಾಖಲಿಸಿ ಬಂಧಿಸಲಾಗಿದೆ.