
Mangalore- ನೀನು ಅಮ್ಮನಿಗೆ ಹುಟ್ಟಿದ ಮಗನಾದರೆ- ಕಾವೂರಿನಲ್ಲಿ ಕಾಲು ಕೆರೆದುಕೊಂಡು ಗಲಾಟೆ ಮಾಡಿದ ಮೂವರು ಅಪ್ರಾಪ್ತರು ವಶಕ್ಕೆ!
Sunday, October 10, 2021
ಮಂಗಳೂರು; ಮಂಗಳೂರಿನ ಕಾವೂರಿನಲ್ಲಿ ಅಪ್ರಾಪ್ತ ಬಾಲಕರ ತಂಡ ಕಾಲು ಕೆರೆದುಕೊಂಡು ಜಗಳ ಮಾಡಿ ಇಬ್ಬರು ಆಸ್ಪತ್ರೆಗೆ ಸೇರಿದ ಘಟನೆ ನಡೆದಿದೆ.
ಆಶೀಕ್ ಮತ್ತು ಅಝೀಮ್ ಗಾಯಾಳುಗಳು. ಅಝೀಮ್ ಎಂಬಾತನಿಗೆ ಅಪ್ರಾಪ್ತ ನೊಬ್ಬ ಪೋನ್ ಮಾಡಿ ನಿನಗೆ ... ಎಂಬಾತ ಬೈಯುತ್ತಿದ್ದಾನೆ ಎಂದು ಹೇಳಿ ಪೋನ್ ಕಟ್ ಮಾಡಿದ್ದನು. ಆ ಬಳಿಕ ಬೈಯುತ್ತಿದ್ದ ಎಂಬ ವ್ಯಕ್ತಿಗೆ ಅಝೀಮ್ ಪೋನ್ ಮಾಡಿದಾಗ ಹೌದು, ನಾನೆ ಬೈದದ್ದು..ನೀನು ಅಮ್ಮನಿಗೆ ಹುಟ್ಟಿದ ಮಗನಾದರೆ ಬಾ ಎಂದು ಪೋನ್ ಕರೆ ಕಟ್ ಮಾಡಿದ್ದ.
ಅದರಂತೆ ಅಝೀಮ್ ತನ್ನ ಸಹೋಯ ಅಶೀಕ್ ನನ್ನು ಕರೆದುಕೊಂಡು ಹೋದಾಗ ಅಪ್ರಾಪ್ತ ಬಾಲಕರು ಸೇರಿದಂತೆ ತಂಡವೊಂದು ಬೈದು ಸೋಡಾ ಬಾಟಲ್ , ಬಿಯರ್ ಬಾಟಲಿಯಿಂದ ಮತ್ತು ಜಲ್ಲಿ ಕಲ್ಲುಗಳಿಂದ ಹೊಡೆದು ಹಲ್ಲೆ ನಡೆಸಿದೆ.
ಗಾಯಗೊಂಡ ಇಬ್ಬರು ಸಹೋದರರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಅಪ್ರಾಪ್ತ ( 15 ವರ್ಷದ ಇಬ್ಬರು, 16 ವರ್ಷದ ಓರ್ವ) ಬಾಲಕರನ್ನು ವಶಕ್ಕೆ ಪಡೆದಿದ್ದಾರೆ