
Mangaluru: ಉಳ್ಳಾಲ ಛೋಟಾ ಮಂಗಳೂರು ರಸ್ತೆಯಲ್ಲಿ ಚೂರಿ ಇರಿತ
Wednesday, October 20, 2021
ಮಂಗಳೂರು: ನಗರದ ಉಳ್ಳಾಲದಲ್ಲಿರುವ ಛೋಟಾ ಮಂಗಳೂರು ರಸ್ತೆಯಲ್ಲಿ ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಗ್ಯಾಸ್ ರಿಪೇರಿ ಅಂಗಡಿ ಮಾಲಕ ಹರೀಶ್ ಚೂರಿ ಇರಿಗೊಂಡವರು. ಮೊಗವೀರಪಟ್ನ ನಿವಾಸಿ ವಿಶಾಲ್ ಎಂಬಾತನೇ ಚೂರಿ ಇರಿತ ಕೃತ್ಯದ ಎಂದು ಶಂಕಿಸಲಾಗಿದೆ.
ವೈಯುಕ್ತಿಕ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಸ್ಥಳಕ್ಕೆ ಉಳ್ಳಾಲ ಪೊಲೀಸರು ದೌಢಾಯಿಸಿದ್ದು, ಗಾಯಾಳುವನ್ನು ತೊಕ್ಕೊಟ್ಟು ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ವಿಶಾಲ್ ಗಾಗಿ ಹುಡುಕಾಟ ನಡೆಯುತ್ತಿದೆ.