Mangaluru: ಮುಸ್ಲಿಂ ಎಂಬುದನ್ನು ಮರೆಮಾಚಿ ಅನ್ಯಕೋಮಿನ ಯುವತಿಯನ್ನು ಪ್ರೀತಿಯ ಹೆಸರಿನಲ್ಲಿ ಅತ್ಯಾಚಾರ; ಆರೋಪಿ ಅಂದರ್
Tuesday, October 26, 2021
ಮಂಗಳೂರು: ಪ್ರೀತಿ ಪ್ರೇಮದ ವಿಚಾರದಲ್ಲಿ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಡುತ್ತಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪ ಮಾಡುತ್ತಿರುವ ಬೆನ್ನಲ್ಲೇ ಅಂತಹದ್ದೇ ಒಂದು ಪ್ರಕರಣ ಮಂಗಳೂರಿನಲ್ಲಿ ನಡೆದಿದೆ.
ನಗರದ ಹೊರವಲಯದ ಕಿನ್ನಿಗೋಳಿ ಗಾಳಿಜೋರ ನಿವಾಸಿ ಇಬ್ರಾಹಿಂ(32) ಬಂಧಿತ ಆರೋಪಿ.
ನಗರದ ಬೈಕಂಪಾಡಿಯ ಎಪಿಎಂಸಿ ಯಾರ್ಡ್ ಬಳಿ ಮೊಬೈಲ್ ಶಾಪ್ ಇರಿಸಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ರಾಹಿಂ ಅಲಿಯಾಸ್ ಮುನ್ನ ಅನ್ಯಕೋಮಿನ ಯುವತಿಯೊಂದಿಗೆ ತಾನು ಮುಸ್ಲಿಂ ಎಂಬುದನ್ನು ಮರೆಮಾಚಿ ಲವ್ ಮಾಡುವ ನಾಟಕವಾಡಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈತ ತನ್ನ ಮೊಬೈಲ್ ಶಾಪ್ ಗೆ ಸಿಮ್ ಪಡೆಯಲೆಂದು ಬಂದಿದ್ದ ಹಿಂದೂ ಧರ್ಮದ ಯುವತಿಯ ಮೊಬೈಲ್ ಸಂಖ್ಯೆ ಪಡೆದು ತಾನು
ಹಿಂದೂ ಯುವಕನೆಂದು ನಂಬಿಸಿ ಮಾತನಾಡಲು ಆರಂಭಿಸಿದ್ದಾನೆ.
ಬಳಿಕ ಆಕೆಯೊಂದಿಗೆ ಸ್ನೇಹದಿಂದಿರಲು ಪ್ರಯತ್ನಿಸಿದ್ದಾನೆ. ಬಳಿಕ ಆತ ತಾನು ಮುಸ್ಲಿಂ ಎಂಬ ವಿಚಾರವನ್ನು ಮರೆಮಾಚಿ ಹಿಂದೂವೆಂದು ನಂಬಿಸಿ ಪ್ರೀತಿಸುವ ನಾಟಕವಾಡಿದ್ದಾನೆ. 2021ರ ಆಗಸ್ಟ್ ನಲ್ಲಿ ಆಕೆಯನ್ನು ಲಾಡ್ಜ್ ಗೆ ಕರೆದೊಯ್ದು ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಬೆಳೆಸಿದ್ದಾನೆ. ಬಳಿಕ ಆಕೆಗೆ ಬೆದರಿಕೆಯೊಡ್ಡಲು ಪ್ರಾರಂಭಿಸಿದ್ದಾನೆ. ಇದೀಗ ಸಂತ್ರಸ್ತೆ ಆರೋಪಿಯ ಕಿರುಕುಳದಿಂದ ಬೇಸತ್ತು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.