ಬಂಟ್ವಾಳದ ಮಾವಿನಕಟ್ಟೆಯಲ್ಲಿ ಪಕ್ಷಿಪ್ರೇಮಿ ದಂಪತಿ- ಪಕ್ಷಿಗಳಿಗಾಗಿಯೆ ನೀಡಿದ್ರು ಎರಡು ಎಕರೆ ಭೂಮಿ!
Friday, October 15, 2021
ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪಕ್ಷಿಪ್ರೇಮಿ ದಂಪತಿಗಳು ತಮ್ಮ ವಿಶೇಷ ಕಾರ್ಯದಿಂದ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಬಂಟ್ವಾಳ ತಾಲೂಕು ಮಾವಿನಕಟ್ಟೆ ಎಲಿಯನಡುಗೋಡು ಗ್ರಾಮದ ಮೂಡಾಯಿಬೆಟ್ಟು ವಿನಲ್ಲಿರುವ ನಿತ್ಯಾನಂದ ಶೆಟ್ಟಿ ಮತ್ತು ಅವರ ಪತ್ನಿ ರಮ್ಯ ನಿತ್ಯಾನಂದ ಶೆಟ್ಟಿ ಇವರು ಪಕ್ಷಿಗಳ ಮೇಲಿನ ವಿಶೇಷ ಪ್ರೀತಿಯಿಂದ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಇವರು ಗುಬ್ಬಚ್ಚಿ ಗೂಡು ಎಂಬ ಕಲ್ಪನೆಯಲ್ಲಿ ಹಕ್ಕಿಗಳ ಸಂರಕ್ಷಣೆಗಾಗಿ ವಿಶೇಷ ಕಾರ್ಯ ಮಾಡುತ್ತಿದ್ದಾರೆ. ಮನೆಯ ಸುತ್ತಲೂ ಹಕ್ಕಿಗಳಿಗಾಗಿ ಗೂಡುಗಳನ್ನು ಕಟ್ಟಿ ಅವುಗಳು ಸ್ಬಚ್ಚಂದವಾಗಿ ಇರುವ ವಾತವರಣ ರೂಪಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ ತಮ್ಮ ಭೂಮಿಯಲ್ಲಿ ಎರಡು ಎಕರೆಯನ್ನು ಪಕ್ಷಿಗಳಿಗಾಗಿ ಮೀಸಲಿಟ್ಟಿದ್ದಾರೆ. ಇಲ್ಲಿ ಪಕ್ಷಿಗಳಿಗಾಗಿ ಮನೆ, ಗೂಡುಗಳನ್ನು ನಿರ್ಮಿಸಿದ್ದಾರೆ.
ಇಲ್ಲಿ ಬೆಳೆಯುವ ಹಣ್ಣು ಹಂಪಲುಗಳನ್ನು ಹಕ್ಕಿಗಳಿಗಾಗಿಯೆ ಇಟ್ಟಿದ್ದಾರೆ. ಈ ಮೂಲಕ ಪಕ್ಷಿ ಸಂಕುಲದ ಉಳಿವಿಗಾಗಿ ವಿಶೇಷ ಆಸಕ್ತಿಯನ್ನು ತೋರಿಸಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ವಿಡಿಯೋ ದಲ್ಲಿ ನೋಡಿ