
ನಾಪತ್ತೆಯಾದ ಬೆಂಗಳೂರಿನ ಒಂದೇ ಪ್ಲ್ಯಾಟ್ ನ ನಾಲ್ವರು ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಪತ್ತೆ
Tuesday, October 12, 2021
ಮಂಗಳೂರು: ಬೆಂಗಳೂರಿನ ಒಂದೇ ಪ್ಲ್ಯಾಟ್ ನಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಸೇರಿದಂತೆ ಓರ್ವ ಕಾಲೇಜು ಯುವತಿಯು ಇಂದು ಮಂಗಳೂರಿನ ಕೆಎಂಸಿ ಆಸ್ಪತ್ರೆ ಬಳಿ ಪತ್ತೆಯಾಗಿದ್ದಾರೆ
ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿ ಯುವತಿ ಅಮೃತವರ್ಷಿಣಿ (21), ರಾಯನ್ ಸಿದ್ಧಾಂತ (12), ಭೂಮಿ (12) ಮತ್ತು ಚಿಂತನ್ (12) ಪತ್ತೆಯಾದವರು.
ನಾಲ್ವರೂ ಒಂದೇ ಅಪಾರ್ಟ್ ಮೆಂಟ್ ನಿಂದ ನಾಪತ್ತೆಯಾಗಿದ್ದರು. ಓದಿನಲ್ಲಿ ಆಸಕ್ತಿ ಇಲ್ಲ, ಕ್ರೀಡೆಯಲ್ಲಿ ಸಾಧನೆ ಮಾಡುತ್ತೇವೆ ಎಂದು ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಇದೀಗ ನಾಲ್ವರನ್ನೂ ಪಾಂಡೇಶ್ವರ ಪೊಲೀಸರು ರಕ್ಷಣೆ ಮಾಡಿದ್ದಾರೆ. ಮಕ್ಕಳನ್ನು ಉಪ್ಪಾರಪೇಟೆ ಪೊಲೀಸರಿಗೆ ಹಸ್ತಾಂತರಿದಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.