
ಮಂಗಳೂರು-ಮಿಥುನ್ ರೈ ಪರ ಪೋಸ್ಟ್ ವಿವಾದ- ಮೂಡುಶೆಡ್ಡೆಯಲ್ಲಿ ತಲವಾರು ಝಳಪಿಸಿದ ತಂಡ- ಮುಂದೇನಾಯಿತು ? ಈ ವಿಡಿಯೋ ನೋಡಿ
ಮಂಗಳೂರು: ಸಾಮಾಜಿಕ
ಜಾಲತಾಣದಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಪರ ಪೋಸ್ಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು
ತಂಡಗಳ ನಡುವೆ ಘರ್ಷಣೆ ನಡೆದಿದ್ದು ಐವರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಮೂಡುಶೆಡ್ಡೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಅಷ್ಪಕ್ ಎಂಬಾತ ಕಾಂಗ್ರೆಸ್ ಮುಖಂಡ ಮಿಥುನ್ ರೈ
ಪರ ಪೋಸ್ಟ್ ಗಳನ್ನು ಹಾಕುತ್ತಿದ್ದ. ಇದಕ್ಕೆ ಸಂಬಂಧಿಸಿದಂತೆ ವಿವೇಕಾನಂದ ಎಂಬಾತ ಅಷ್ಟಕ್ ಜೊತೆಗೆ ತಗಾದೆ ತೆಗೆದಿದ್ದ.
ಅವರ ನಡುವೆ ಚಕಮಕಿ ನಡೆದು ವಿವೇಕಾನಂದ ಅಸ್ಪಕ್ ಗೆ ಹಲ್ಲೆಯನ್ನು ನಡೆಸಿದ್ದ.
ಈ ಘಟನೆಯ ಮರುದಿನ ಅಷ್ಪಕ್ ತನ್ನ ತಂಡದೊಂದಿಗೆ ವಿವೇಕಾನಂದನ ಮೇಲೆ ಹಲ್ಲೆಗೆ
ಯತ್ನಿಸಿದ್ದಾರೆ. ವಿವೇಕಾನಂದ ಅಂಗಡಿಯೊಂದಕ್ಕೆ ಬರುತ್ತಿರುವ
ಮಾಹಿತಿ ಪಡೆದ ಈ ತಂಡ ಅಲ್ಲಿ ಹೋಗಿ ಹಲ್ಲೆ ನಡೆಸಲು ಯತ್ನಿಸಿತ್ತು. ಆದರೆ ವಿವೇಕಾನಂದ ಅಂಗಡಿಯೊಳಕ್ಕೆ
ಹೋಗಿ ತಪ್ಪಿಸಿಕೊಂಡಿದ್ದ. ಈ ತಂಡ ತಲವಾರು ಝಳಪಿಸಿ ಬೆದರಿಕೆ ಹಾಕಿ ಹೋಗಿದೆ. ಇದನ್ನು ಯುವತಿಯೊಬ್ಬಳು
ವಿಡಿಯೋ ಮಾಡಿದ್ದಳು.
ಈ ಘಟನೆಯ ಬಳಿಕ ಇತ್ತಂಡಗಳಿಂದ ದೂರು ದಾಖಲಾಗಿದ್ದು ಪೊಲೀಸರು ತಲವಾರು
ಝಳಪಿಸಿದ ಐವರನ್ನು ಬಂಧಿಸಿದ್ದಾರೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ