
ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ- ಕಾರನ್ನು ಅಡ್ಡಗಟ್ಟಿ ಮಹಿಳೆಯರಿಗೆ ಅಗೌರವ ತೋರಿದ ಇಬ್ಬರು ಅಂದರ್!
Saturday, October 9, 2021
ಮಂಗಳೂರು; ಕಾರಿನಲ್ಲಿ ಅನ್ಯಮತೀಯ ಯುವಕ ಯುವತಿಯರು ಒಟ್ಟಿಗೆ ಪ್ರಯಾಣಿಸುತ್ತಿದ್ದಾರೆ ಎಂದು ಅನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣ ಮೂಡಬಿದಿರೆಯಲ್ಲಿ ನಡೆದಿದೆ.
ಮೂಡಬಿದ್ರೆ ಹೊರವಲಯದಲ್ಲಿ ಮಾರುತಿ ಆಲ್ಟೋ ಗಾಡಿಯಲ್ಲಿ ಒಬ್ಬ ವ್ಯಕ್ತಿ ಯು ತನ್ನ ಪತ್ನಿ ಮತ್ತು ಇಬ್ಬರು ಮಹಿಳೆಯರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಇವರ ಕಾರನ್ನು ಆರರಿಂದ ಎಂಟು ಜನ ತಡೆದು ಪರಿಶೀಲಿಸಿದ್ದು , ಅದರಲ್ಲಿ ಅನ್ಯ ಕೋಮಿಗೆ ಸೇರಿದ ಇಬ್ಬರು ಹೆಣ್ಣು ಮಕ್ಕಳನ್ನು ಕಂಡು ಅವರಿಗೆ ಅಗೌರವ ತರುವ ರೀತಿಯಲ್ಲಿ ವರ್ತಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ 354 153a 504 506 ತುಂಬಿ ಕಲಂ ಒಳಗೊಂಡಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ,ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. Samhithraj (36)
Sandeep poojary (34) ಎಂಬವರನ್ನು ಬಂಧಿಸಲಾಗಿದೆ.
ಈ ವಾಹನದಲ್ಲಿ ಯುವಕನ ಪತ್ನಿ ಮತ್ತು ಇಬ್ಬರು ಅನ್ಯಕೋಮಿನ ಯುವತಿಯರು ಸಂಚರಿಸುತ್ತಿದ್ದರು.