
ಮಾದಕ ಚೆಲುವೆ ಮೌನಿರಾಯ್ ಮದುವೆಯಾಗಲಿದ್ದಾರಂತೆ! ಹುಡುಗನ ಬಗ್ಗೆ ಮಾಹಿತಿ ಕೊಟ್ಟ ಸಹೋದರ
Monday, October 4, 2021
ಬೆಂಗಳೂರು: ಬಾಲಿವುಡ್ ನಟಿ, ಮಾದಕ ಚೆಲುವೆ ಮೌನಿ ರಾಯ್ ಮದುವೆಯಾಗುವ ಸುದ್ದಿ ಹರಿದಾಡುತ್ತಿದೆ
ಮುಂದಿನ ವರ್ಷ ಜನವರಿಯಲ್ಲಿ ಅವರು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ದುಬೈ ಮೂಲದ ಬ್ಯುಸಿನೆಸ್ ಮ್ಯಾನ್ ಸೂರಜ್ ನಂಬಿಯಾರ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮೌನಿ ರಾಯ್ ಸೋದರ ವಿದ್ಯುತ್ ರಾಯ್ ಸರ್ಕಾರ್ ಇಂಟರ್ ವ್ಯೂ ನಲ್ಲಿ ಮಾಹಿತಿ ನೀಡಿದ್ದಾರೆ . ಆದರೆ, ಮೌನಿ ರಾಯ್ ಮಾತ್ರ ಈ ವಿಚಾರದಲ್ಲಿ ಬಾಯಿ ಬಿಟ್ಟಿಲ್ಲ.
ಲಾಕ್‌ಡೌನ್ ವೇಳೆ ಮೌನಿರಾಯ್ ದುಬೈನಲ್ಲಿಯೇ ಇದ್ದು ಸೂರಜ್ ಜೊತೆ ತಿರುಗಾಡಿಕೊಂಡಿದ್ದರು. ಕೆಜಿಎಫ್ ಚಾಪ್ಟರ್1ರ ಹಿಂದಿ ಆವೃತ್ತಿಯಲ್ಲಿ ಮೌನಿರಾಯ್ 'ಗಲೀ ಗಲೀ' ಐಟಂ ನೃತ್ಯದಲ್ಲಿ ಮಿಂಚಿದ್ದರು.
ಈ ನೃತ್ಯ ಬಾಲಿವುಡ್‌ನಲ್ಲಿ ಅವರಿಗೆ ದೊಡ್ಡ ಹೆಸರು ತಂದಿತ್ತು. ಮೌನಿ ರಾಯ್‌ಗೆ Instagram
ನಲ್ಲಿ 20 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.