ಸಿದ್ದಾಪುರ: ಅಡುಗೆ ಮಾಡಿಲ್ಲವೆಂದು ತಾಯಿ-ತಂಗಿಯನ್ನೇ ಗುಂಡಿಕ್ಕಿ ಕೊಂದ ಮನೆಮಗ!
Thursday, October 14, 2021
ಶಿರಸಿ: ಅಡುಗೆ ಮಾಡಿಲ್ಲವೆಂದು ಕೋಪಗೊಂಡ ಯುವಕ ತಾಯಿ ಹಾಗೂ ತಂಗಿಯನ್ನೇ ಗುಂಡಿಕ್ಕಿ ಕೊಂದ ಘಟನೆ ಉಪ ವಿಭಾಗದ ವ್ಯಾಪ್ತಿಯ ಸಿದ್ದಾಪುರ ದೊಡ್ಮನೆಯ ಸಮೀಪ ಕುಡೆಗೋಡಿನಲ್ಲಿ ವರದಿಯಾಗಿದೆ.
ತಾಯಿ ಪಾರ್ವತಿ ಹಸ್ಲರ್ (45) ಸಹೋದರಿ ಬಿಎ ಪದವಿಧರೆ ರಮ್ಯಾ ಹಸ್ಲರ್ (20 ) ಮೃತಪಟ್ಟವರು.
ಮದ್ಯದ ನಶೆಯಲ್ಲಿ ಮನೆಗೆ ಬಂದಿದ್ದ ಆರೋಪಿ ಮಂಜುನಾಥ ಹಸ್ಲರ್(24) ಅಡುಗೆ ಯಾಕೆ ಮಾಡಲಿಲ್ಲ ಎಂದು ತಗಾದೆ ತೆಗೆದಿದ್ದಾನೆ. ಬಳಿಕ ತನ್ನ ನಾಡ ಬಂದೂಕಿನಿಂದ ಗುಂಡಿಕ್ಕಿ ತಾಯಿ ಹಾಗೂ ತಂಗಿಯನ್ನೇ ಕೊಂದಿದ್ದಾನೆ. ಆರೋಪಿಯನ್ನು ಈಗಾಗಲೇ ಬಂಧಿಸಿಲಾಗಿದೆ. ಶಿರಸಿ ಪೊಲೀಸ್ ಉಪಾಧೀಕ್ಷಕ ರವಿ ನಾಯ್ಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.