
murder by husband- ಮಗುವಿಗೆ ಹಾಲುಣಿಸುತ್ತಿರುವಾಗಲೇ ಪತ್ನಿಯ ಕತ್ತು ಕೊಯ್ದ ಕಿರಾತಕ ಪತಿ
Saturday, October 23, 2021
ಕಲಬುರಗಿ: ಮುಗುವಿಗೆ ಹಾಲುಣಿಸುತ್ತಿರುವಾಗಲೇ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿರುವ ಅಮಾನುಷ ಘಟನೆ ಕಲಬುರಗಿಯ ರಾಘವೇಂದ್ರ ಕಾಲನಿಯಲ್ಲಿ ಸಂಭವಿಸಿದೆ. ಇದೀಗ ಕಿರಾತಕ ಪತಿ ಪೊಲೀಸರ ಅತಿಥಿಯಾಗಿದ್ದಾನೆ.
ಕಲಬುರಗಿಯ ರಾಘವೇಂದ್ರ ಕಾಲನಿಯ ನಸೀಮಾ ಬೇಗಂ (35) ಮೃತ ದುರ್ದೈವಿ. ಈಕೆಯ ಪತಿ ಇಬ್ರಾಹಿಂ ಕೊಲೆಗೈದಿರುವ ಆರೋಪಿ.
ವಿಪರೀತ ಮದ್ಯಸೇವನೆಯ ಚಟ ಅಂಟಿಸಿಕೊಂಡಿದ್ದ ಇಬ್ರಾಹೀಂ, ಹಣಕ್ಕಾಗಿ ನಿತ್ಯ ಪತ್ನಿಯನ್ನು ಪೀಡಿಸುತ್ತಿದ್ದ. ಅಲ್ಲದೆ ಆಕೆಯ ತವರು ಮನೆಯಿಂದಲೂ ಹಣ ತರುವಂತೆ ಕಿರುಕುಳ ಕೊಡುತ್ತಿದ್ದನಂತೆ.
ತವರು ಮನೆಯಿಂದ ದುಡ್ಡು ತರದಿರುವ ಹಿನ್ನೆಲೆಯಲ್ಲಿ ಪತ್ನಿಯನ್ನು ಮಗುವಿಗೆ ಹಾಲು ಕುಡಿಸುವಾಗಲೇ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಇಬ್ರಾಹೀಂನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.