
Muthalik - ಈ ಬಾರಿಯೂ ದಕ್ಕಲಿಲ್ಲ ಬಿಜೆಪಿ ಟಿಕೆಟ್: ಬೇಸರದಿಂದ ಮಹತ್ವದ ತೀರ್ಮಾನ ಪ್ರಕಟಿಸಿದ ಪ್ರಮೋದ್ ಮುತಾಲಿಕ್!
ಈ ಬಾರಿಯೂ ಸಿಗಲಿಲ್ಲ ಬಿಜೆಪಿ ಟಿಕೆಟ್: ಮಹತ್ವದ ತೀರ್ಮಾನ ಕೈಗೊಂಡ ಪ್ರಮೋದ್ ಮುತಾಲಿಕ್!
ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಈ ಬಾರಿಯೂ ಟಿಕೆಟ್ ವಂಚಿತರಾಗಿದ್ದರು.
ಇದೀಗ ಸಿಂಧಗಿ ಹಾಗೂ ಹಾನಗಲ್ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲೂ ಮುತಾಲಿಕ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಇದರಿಂದ ಬೇಸತ್ತ ಮುತಾಲಿಕ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ರಾಜಕೀಯದ ಸಹವಾಸವೇ ನನಗೆ ಬೇಡ. ಇದ್ದಷ್ಟು ದಿನ ಹಿಂದುತ್ವಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನನಗೆ ರಾಜಕೀಯ ಸಹವಾಸ ಸದ್ಯಕ್ಕೆ ಬೇಡ. ಉಪ ಚುನಾವಣೆಗೂ ಸ್ಪರ್ಧೆ ಮಾಡಲ್ಲ. ಭ್ರಷ್ಟ ರಾಜಕಾರಣಕ್ಕೆ ನಾನು ಹೊಂದಾಣಿಕೆಯಾಗಲ್ಲ. ಸಾರ್ವಜನಿಕ ಜೀವನದಲ್ಲಿ ಇರುವಷ್ಟು ಕಾಲ ಹಿಂದುತ್ವಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಅವರು ನೋವನ್ನು ವ್ಯಕ್ತಪಡಿಸಿದ್ದಾರೆ.
ರಾಜಕೀಯಕ್ಕೆ ಪ್ರಾಮಾಣಿಕರು, ಹೋರಾಟಗಾರರು ಬೇಡವಾಗಿದ್ದಾರೆ. ಜಾತಿವಾದಿಗಳು, ಗೂಂಡಾಗಳು, ಲೂಟಿ ಕೋರರು ಬೇಗ ಆಪ್ತವಾಗುತ್ತಾರೆ. ಆದ್ದರಿಂದ ನಾನು ರಾಜಕೀಯದಿಂದ ದೂರ ಉಳಿಯುತ್ತೇನೆ. ನನಗೆ ಯಾವ ರಾಜಕೀಯವೂ ಬೇಡ ಎಂದು ಅವರು ಹೇಳಿದ್ದಾರೆ.