-->
ಮಂಗಳೂರು: ಕಾಂಗ್ರೆಸ್ ನಾಯಕರಿಬ್ಬರ ಮಾತು ವೈರಲ್ ಡಿಕೆಶಿಯನ್ನು ಮುಗಿಸಲು ಸಿದ್ದರಾಮಯ್ಯ ಮಾಡಿರುವ ತಂತ್ರ: ನಳಿನ್ ಕುಮಾರ್ ಕಟೀಲು

ಮಂಗಳೂರು: ಕಾಂಗ್ರೆಸ್ ನಾಯಕರಿಬ್ಬರ ಮಾತು ವೈರಲ್ ಡಿಕೆಶಿಯನ್ನು ಮುಗಿಸಲು ಸಿದ್ದರಾಮಯ್ಯ ಮಾಡಿರುವ ತಂತ್ರ: ನಳಿನ್ ಕುಮಾರ್ ಕಟೀಲು

ಮಂಗಳೂರು: ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿಯವರ ಬಗ್ಗೆ ಉಗ್ರಪ್ಪ ಹಾಗೂ ಸಲೀಂ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನ‌ ಭ್ರಷ್ಟಾಚಾರ ಕರ್ಮಕಾಂಡ ಬಯಲಿಗೆ ಬಂದಿದೆ. ಅವರು ಕಲೆಕ್ಷನ್ ಗಿರಾಕಿಗಳೆಂದು ನಾವು ಹೇಳಿದ್ದಲ್ಲ, ಕಾಂಗ್ರೆಸ್ ನ ನಾಯಕರೇ ಒಪ್ಪಿದ್ದಾರೆ‌. ಕಾಂಗ್ರೆಸ್ ರಾಜ್ಯಾಧ್ಯಕ್ಷರ ಬಗ್ಗೆ ಕಲೆಕ್ಷನ್ ಗಿರಾಕಿ, ಭ್ರಷ್ಟಾಚಾರ, ಹಫ್ತಾ ವಸೂಲಿ ಎಂಬ ವಿಚಾರ ಹೊರ ಹಾಕಿದ್ದಾರೆ. ಡಿಕೆಶಿಯವರ ಹುಡುಗರಲ್ಲೇ 500 ಕೋಟಿ ರೂ. ಇದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಯಾಗಲಿ, ಸತ್ಯಾಸತ್ಯತೆ ಹೊರ ಬರಲಿ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

ಈ ಹೇಳಿಕೆ ವೈರಲ್ ರಾಜಕೀಯ ಪ್ರೇರಿತವಾಗಿದ್ದು, ಇಲ್ಲದಿದ್ದಲ್ಲಿ‌ ಈ ರೀತಿಯ ಮಾತುಕತೆಗಳು ಕಾಂಗ್ರೆಸ್ ಕಚೇರಿಯಲ್ಲಿ ಕೇಳಿ ಬರುತ್ತಿರಲಿಲ್ಲ. ಇದರ ಹಿಂದೆ ಡಿಕೆಶಿಯನ್ನು ಮುಗಿಸುವ ತಂತ್ರಗಾರಿಕೆಯಿದ್ದು, ಡಿಕೆಶಿ ಪ್ರಭಾವ ಕುಗ್ಗಿಸಲು ಸಿದ್ದರಾಮಯ್ಯ ಮಾಡಿರುವ ತಂತ್ರಗಾರಿಕೆ ಇರಬಹುದು. 

ಈ ಹಿಂದೆ ಡಿಕೆಶಿ ಐಟಿ ರೈಡ್ ವೇಳೆ ಅದು ರಾಜಕೀಯ ಪ್ರೇರಿತ ಅಂದಿದ್ದರು. ಆದರೆ ಇವತ್ತು ಯಾವುದೇ ರಾಜಕೀಯ ಪ್ರೇರಿತ ಇಲ್ಲದೇ ಕಾಂಗ್ರೆಸ್ ಕಚೇರಿಯಲ್ಲೇ ಈ ರೀತಿಯ ಮಾತು ಹೊರ ಬಂದಿದೆ.  ಉಗ್ರಪ್ಪ ಹಾಗೂ ಸಲೀಂ ಮೂಲಕ ಸಿದ್ದರಾಮಯ್ಯನವರು ಈ ಹೇಳಿಕೆಯನ್ನು ನೀಡಿಸಿದ್ದಾರೆ. ಆದ್ದರಿಂದ ಇದರ ಬಗ್ಗೆ ತನಿಖೆಯಾದಲ್ಲಿ ಆಗ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಳ್ಳಲಿದ್ದಾರೆ.

ಬಿಜೆಪಿ ಇದನ್ನು ಹೇಳಿದರೆ ಅದನ್ನು ರಾಜಕಾರಣ ಎಂದು ಹೇಳಲಾಗುತ್ತದೆ. ಕಾಂಗ್ರೆಸ್ ವಿನಾಶದ ಅಂಚಿನಲ್ಲಿದ್ದು, ಮತ್ತೆ ಮೇಲೆ ಏಳೋದೇ ಇಲ್ಲ. ಮುಂದಿನ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ಕಾಂಗ್ರೆಸ್ ಠೇವಣೆ ಕಳೆದುಕೊಳ್ಳೋದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಲಿದೆ. ಕಾಂಗ್ರೆಸ್ ನ ಈ ಹೇಳಿಕೆಗಳು ಬಿಜೆಪಿ ರಾಜಕೀಯ ಪ್ರೇರಿತವಲ್ಲ. ಸಿದ್ದರಾಮಯ್ಯನ ಗುಂಪುಗಾರಿಕೆ ಪ್ರೇರಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಜನರು ಇದನ್ನೆಲ್ಲಾ ಗಮನಿಸುತ್ತಿದ್ದು, ಇನ್ನಷ್ಟು ಕಾಂಗ್ರೆಸ್ ನನ್ನು ತಿರಸ್ಕರಿಸುತ್ತಾರೆ.‌ ಬಿಜೆಪಿ ಇವರ ಒಳಜಗಳದ ಲಾಭ ಯಾವತ್ತೂ ಪಡೆಯೊಲ್ಲ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ತಮ್ಮ ರಾಜಕೀಯ ಸ್ಥಾನ ಭದ್ರತೆಗೆ ಯತ್ನಿಸುತ್ತಿದ್ದಾರೆ.‌ ಸಿದ್ದರಾಮಯ್ಯ ಓರ್ವ ಈ ರಾಜ್ಯದ ಹಿಟ್ಲರ್ ಆಗಿದ್ದು, ಅವರಿದ್ದಾಗ ಸಾಕಷ್ಟು ಹಿಂದೂಗಳ ಹತ್ಯೆಯಾಗಿದೆ. ಸಿದ್ದರಾಮಯ್ಯ ಆರ್ ಎಸ್ ಎಸ್ ಗೆ ಬೈದಾಗ ಯೋಚನೆ ಮಾಡಬೇಕಿತ್ತು. ಸಂಘ ಇಡೀ ಜಗತ್ತಿನಾದ್ಯಂತ ಸಮಾಜ ಸೇವೆ ಮಾಡುತ್ತಿದೆ. ಇವರ ಕಾಂಗ್ರೆಸ್ ಒಂದೇ ಒಂದು ಸೇವಾಕಾರ್ಯ ಮಾಡಿಲ್ಲ ಎಂದರು‌.

ಸಿದ್ದರಾಮಯ್ಯ ‌ಕೋಟಿಗಟ್ಟಲೆ ಆಸ್ತಿ ಮಾಡಿದ್ದಾರೆ. ಆದರೆ ಒಂದು ಕಾಂಗ್ರೆಸ್ ಕಚೇರಿ ಕೂಡ ಮಾಡಿಲ್ಲ. ಇವರ ಒಂದು ತಂತ್ರ ಪ್ರಚಾರದಲ್ಲಿ ಉಳಿಯೋದು ಮತ್ತೊಂದು ಡಿಕೆಶಿಯನ್ನು ಮುಗಿಸೋದು. ಜೆಡಿಎಸ್ ನಲ್ಲಿ ಇದ್ದಾಗಲೂ ದೇವೇಗೌಡರನ್ನು ತುಳಿದರು. ಸೋನಿಯಾ ಗಾಂಧಿ ಬಗ್ಗೆಯೇ ಕೆಟ್ಟ ಶಬ್ದದಲ್ಲಿ ಮಾತನಾಡಿದವರು ಸಿಎಂ ಪದವಿಗಾಗಿ ಮತ್ತೆ ಅದೇ ಸೋನಿಯಾ ಕಾಲಿಗೆ ಬಿದ್ದಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article