-->
PARLE G  ಬಿಸ್ಕತ್ ತಿನ್ನದಿದ್ದರೆ ಭವಿಷ್ಯದಲ್ಲಿ ಆಪತ್ತು -5 ರೂ ವಿನ ಬಿಸ್ಕತ್ 50 ರೂಪಾಯಿನಲ್ಲಿ ಮಾರಾಟ- ಯಾಕೆ ಹೀಗಾಯ್ತು ಗೊತ್ತಾ? (VIDEO)

PARLE G ಬಿಸ್ಕತ್ ತಿನ್ನದಿದ್ದರೆ ಭವಿಷ್ಯದಲ್ಲಿ ಆಪತ್ತು -5 ರೂ ವಿನ ಬಿಸ್ಕತ್ 50 ರೂಪಾಯಿನಲ್ಲಿ ಮಾರಾಟ- ಯಾಕೆ ಹೀಗಾಯ್ತು ಗೊತ್ತಾ? (VIDEO)

 



 

ಒಂದು ಕಾಲದಲ್ಲಿ ಎಲ್ಲರ ಅಚ್ಚುಮೆಚ್ಚಿನ ಬಿಸ್ಕತ್ ಆಗಿದ್ದ PARLE- G  ಗೆ ವಿಚಿತ್ರ ಕಾರಣಕ್ಕಾಗಿ ಬಿಹಾರದ ಕೆಲವು ಜಿಲ್ಲೆಗಳಲ್ಲಿ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ.

ಬಿಹಾರದಲ್ಲಿ ಜಿಯುತಿಯಾ ಎಂಬ ಹಬ್ಬ ನಡೆಯುತ್ತಿದ್ದು ಇಲ್ಲಿ PARLE- G   ಬಿಸ್ಕತ್ ಗಾಗಿ ಕೆಲವೆಡೆ ನೂಕುನುಗ್ಗಲು ಆಗಿದೆ. ಇದಕ್ಕೆ ಕಾರಣ ಗಂಡುಮಕ್ಕಳಿಗೆ PARLE- G    ಬಿಸ್ಕತ್ ತಿನ್ನಿಸಬೇಕು. ಅವರು ತಿನ್ನಲು ನಿರಾಕರಿಸಿದರೆ ಭವಿಷ್ಯದಲ್ಲಿ ಅಹಿತಕರ ಘಟನೆಗಳು ನಡೆಯಲಿದೆ ಎಂಬ ವದಂತಿ ಹಬ್ಬಿರುವುದು.



 

ಜಿಯುತಿಯಾ ಹಬ್ಬವೆಂದರೆ ತಾಯಂದಿರು ತಮ್ಮ ಮಕ್ಕಳ ಆರೋಗ್ಯಕ್ಕಾಗಿ ಮಾಡುವ ಹಬ್ಬ. ಈ ಹಬ್ಬದ ಪ್ರಯುಕ್ತ ತಮ್ಮ ಮಕ್ಕಳ ಭವಿಷ್ಯ ಮತ್ತು ಆರೋಗ್ಯಕ್ಕಾಗಿ 24 ಗಂಟೆ ಉಪವಾಸವನ್ನು ಅವರು ಮಾಡುತ್ತಾರೆ. ಈ ಹಬ್ಬದ ಮಧ್ಯೆ PARLE- G   ಬಿಸ್ಕತ್ ಬಗ್ಗೆ ಹಬ್ಬದಿ ವದಂತಿಯಿಂದ ಬಿಸ್ಕತ್ ಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ.

 

ಬಿಹಾರ ಜಿಲ್ಲೆಯ ಮೋತಿಹಾರಿ, ಸೀತಾಮರ್ಹಿ ಮೊದಲಾದ ಜಿಲ್ಲೆಗಳಲ್ಲಿ ಈ ವದಂತಿ ವ್ಯಾಪಕವಾಗಿ ಹಬ್ಬಿದ್ದು  ಅಂಗಡಿಗಳ ಮುಂದೆ ಪಾರ್ಲೆ ಜಿ ಬಿಸ್ಕತ್ ಖರೀದಿಗೆ ಮುಗಿಬೀಳುತ್ತಿದ್ದಾರೆ. ಇದೀಗ ಈ ಪ್ರದೇಶಗಳಲ್ಲಿ 5 ರೂ ವಿನ ಬಿಸ್ಕತ್ ಕಾಳಸಂತೆಯಲ್ಲಿ 50 ರೂ ವಿಗೆ ಮಾರಾಟವಾಗುತ್ತಿರುವುದು ವರದಿಯಾಗಿದೆ.

Ads on article

Advertise in articles 1

advertising articles 2

Advertise under the article