-->
ಬಳಕೆದಾರರಿಗೆ ಎಕ್ಸ್ ಟ್ರಾ ಹಣ ಚಾರ್ಜ್ ಮಾಡಲಿರುವ 'ಫೋನ್ ಪೇ'!

ಬಳಕೆದಾರರಿಗೆ ಎಕ್ಸ್ ಟ್ರಾ ಹಣ ಚಾರ್ಜ್ ಮಾಡಲಿರುವ 'ಫೋನ್ ಪೇ'!

ನವದೆಹಲಿ: ಹಲವು ವರ್ಷಗಳಿಂದ ಬಹುತೇಕ ಹಣದ ವ್ಯವಹಾರಗಳಿಗೆ  ಬಹಳಷ್ಟು ಮಂದಿ ಫೋನ್‌-ಪೇ ಬಳಕೆ ಮಾಡುತ್ತಿದ್ದರು. ಅತೀ ಸುಲಭವಾಗಿ ದಿಢೀರನೇ ಒಂದು ನಿಮಿಷದೊಳಗೆ ಹಣವನ್ನು ವರ್ಗಾಯಿಸುವ ಹಿನ್ನೆಲೆಯಲ್ಲಿ ಈ ಆ್ಯಪನ್ನು ಬಳಕೆ ಮಾಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. 

ಆದರೆ ಇದೀಗ ಫೋನ್‌ ಪೇ ಆ್ಯಪ್ ತನ್ನ ವಹಿವಾಟುದಾರರಿಗೆ ಎಕ್ಸ್‌ಟ್ರಾ ಚಾರ್ಜ್‌ ಮಾಡುತ್ತದೆ ಎಂದು ಹೇಳಿಕೊಂಡಿದೆ. ಸದ್ಯ ಮೊಬೈಲ್‌ ರೀಚಾರ್ಜ್‌ ಮಾಡಿದಲ್ಲಿ ಹೆಚ್ಚುವರಿಯಾಗಿ ಹಣ ಪಾವತಿ ಮಾಡಬೇಕಿದೆ. 50 ರೂ. ಮೇಲ್ಪಟ್ಟು ಮೊಬೈಲ್ ಚಾರ್ಜ್ ಮಾಡಿದರೆ ಆ ವಹಿವಾಟಿನ ಮೇಲೆ 1 - 2 ರೂ. ಪ್ರೊಸೆಸಿಂಗ್ ಶುಲ್ಕ ತಗಲುತ್ತದೆ. 50 ರೂಪಾಯಿ ಒಳಗಿನ ಮೊಬೈಲ್ ರೀಚಾರ್ಜ್​ ಮಾಡಿದಲ್ಲಿ ಶುಲ್ಕ ಇರುವುದಿಲ್ಲ. ಆದರೆ 50ರಿಂದ 100 ರೂ. ಒಳಗೆ ರೀಚಾರ್ಜ್ ಮಾಡಿದಲ್ಲಿ 1 ರೂ. ಶುಲ್ಕ ವಿಧಿಸುತ್ತದೆ. 100 ರೂ. ಮೇಲ್ಪಟ್ಟು​ ರೀಚಾರ್ಜ್ ಮಾಡಿಸಿದಲ್ಲಿ ಫೋನ್​ಪೇ ಗ್ರಾಹಕರಿಗೆ 2 ರೂ. ವಿಧಿಸುತ್ತದೆ. 

ಸದ್ಯ ಇದು ಸಣ್ಣ ಪ್ರಮಾಣದ ಪ್ರಯೋಗ ಎಂದು ಫೋನ್ ಪೇ ಹೇಳಿಕೊಂಡಿದೆ. ಕ್ರೆಡಿಟ್​ ಕಾರ್ಡ್ ಮೂಲಕ ಪಾವತಿಗೂ ಇತರ ಪ್ಲಾಟ್​ಫಾರ್ಮ್​ನಂತೆಯೇ ಫೋನ್​ಪೇ ಕೂಡ ದರ ವಿಧಿಸಲಿದೆ. ಥರ್ಡ್​ ಪಾರ್ಟಿ ಆ್ಯಪ್ (ಅಪ್ಲಿಕೇಷನ್) ಪೈಕಿ ಯುಪಿಐ ವಹಿವಾಟಿನಲ್ಲಿ ಫೋನ್​ಪೇ ದೊಡ್ಡ ಮಟ್ಟದ ಪಾಲು ಹೊಂದಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲಿಯೇ ಇದು ಸುಮಾರು 165 ಕೋಟಿ ರೂ. ಯುಪಿಐ ವಹಿವಾಟು ಮಾಡಿದೆ. 

ಫ್ಲಿಪ್​ಕಾರ್ಟ್​ನ ಮಾಜಿ ಅಧಿಕಾರಿಗಳಾದ ಸಮೀರ್ ನಿಗಮ್, ರಾಹುಲ್ ಚಾರಿ ಮತ್ತು ಬುರ್ಜಿನ್ ಎಂಜಿನೀರ್ ಸೇರಿ 2015ರಲ್ಲಿ ಫೋನ್​ಪೇ ಸ್ಥಾಪಿಸಿದ್ದು, ಸದ್ಯ ಇದಕ್ಕೆ ಸುಮಾರು 30 ಕೋಟಿ ನೋಂದಾಯಿತ ಬಳಕೆದಾರರಿದ್ದಾರೆ. 

Ads on article

Advertise in articles 1

advertising articles 2

Advertise under the article