
ದೀಪಕ್ ರಾವ್ ಕೊಲೆ ಆರೋಪಿ ಪಿಂಕಿ ನವಾಜ್ ಅರೆಸ್ಟ್- ಸಾಕ್ಷಿಯಾಗಿದ್ದ ಕಾರ್ಪೋರೇಟರನ್ನು ಹತ್ಯೆ ಮಾಡಲು ಈತ ಸ್ಕೆಚ್ ಹಾಕಿದ್ದ !
Friday, October 22, 2021
ಮಂಗಳೂರು: ಮಂಗಳೂರನ್ನು ಕೆಲ ವರ್ಷಗಳ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ದೀಪಕ್ ರಾವ್ ಕೊಲೆ ಪ್ರಕರಣದ
ಆರೋಪಿ ಪಿಂಕಿ ನವಾಜ್ ಮತ್ತೊಮ್ಮೆ ಕೋಮು ಘರ್ಷನೆಗೆ ಸ್ಕೆಚ್ ಹಾಕಿದ ಆಡಿಯೋ ವೈರಲ್ ಆದ ಬಳಿಕ ಮಂಗಳೂರು
ನಗರ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಪಿಂಕಿ ನವಾಜ್ ಸೇರಿದಂತೆ ಐವರನ್ನು ಮಂಗಳೂರು ನಗರ ಪೊಲಿಸರು ಬಂಧಿಸಿದ್ದು
ವಿಚಾರಣೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ವಾಟ್ಸಪ್
ಗ್ರೂಪ್ ವೊಂದರ ಆಡಿಯೋ ಮಾತುಕತೆಯ ವಿಡಿಯೋ ವೈರಲ್
ಆಗಿದ್ದು ಇದರಲ್ಲಿ ಪಿಂಕಿ ನವಾಜ್ ಸ್ಥಳೀಯ ಕಾರ್ಪೋರೇಟರ್ ಮತ್ತು ದೀಪಕ್ ರಾವ್ ಪ್ರಕರಣದ ಸಾಕ್ಷಿ ಯನ್ನು
ಹತ್ಯೆ ಮಾಡುವ ಸ್ಕೆಚ್ ಹಾಕಿದ್ದು ಕಂಡುಬಂದಿತ್ತು. ಈ ಮೂಲಕ ಗಲಭೆಗೆ ಸ್ಕೆಚ್ ಹಾಕಲಾಗಿತ್ತು.
ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದು ವೈರಲ್ ಆದ
ಬಳಿಕ ಇದೀಗ ಮಂಗಳೂರು ನಗರ ಪೊಲಿಸರು ಐವರನ್ನು ಬಂಧಿಸಿದ್ದಾರೆ