
ಮಂಗಳೂರು: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಮುನ್ನೂರು ಗ್ರಾಪಂ ಸದಸ್ಯ ಪೊಲೀಸ್ ವಶಕ್ಕೆ
Thursday, October 7, 2021
ಮಂಗಳೂರು: ನಿವೇಶನ ಅರ್ಜಿ ನೀಡಲು ಬಂದಿರುವ ಮಹಿಳೆಯೋರ್ವರಿಗೆ ಗ್ರಾಪಂ ಹಿರಿಯ ಸದಸ್ಯನೇ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಆರೋಪಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಳ್ಳಾಲದ ಮುನ್ನೂರು ಗ್ರಾಪಂಗೆ ಮಹಿಳೆಯೊಬ್ಬರು ನಿವೇಶನದ ಅರ್ಜಿ ನೀಡಲು ಬಂದಿದ್ದರು. ಈ ವೇಳೆ ಗ್ರಾಪಂ ಸದಸ್ಯ ಬಾಬು ಶೆಟ್ಟಿ ಮಹಿಳೆಯನ್ನು ಅಧ್ಯಕ್ಷರ ಕೊಠಡಿಗೆ ಬರಬೇಕೆಂದು ಹೇಳಿದ್ದಾನೆ. ಅಲ್ಲಿಗೆ ಹೋದಾಗ ಬಾಬು ಶೆಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆ ನೀಡಿರುವ ದೂರಿನನ್ವಯ ಉಳ್ಳಾಲ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.