
ಉಡುಪಿ: ಮಣಿಪಾಲ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ; ಸಹಪಾಠಿಯಿಂದಲೇ ಕೃತ್ಯ
Thursday, October 28, 2021
ಉಡುಪಿ: ಮಣಿಪಾಲ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿಯನ್ನು ಸಹಪಾಠಿಯೇ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ
ದೆಹಲಿ ಮೂಲದವನಾದ ಮಣಿಪಾಲ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಆರ್ಯನ್ ಚಂದಾವನಿ ಅತ್ಯಾಚಾರ ಮಾಡಿರುವ ಆರೋಪಿ.
ಆರೋಪಿ ಆರ್ಯನ್ ಚಂದಾವನಿ ಹಾಗೂ ಉತ್ತರಪ್ರದೇಶ ಮೂಲದ ಸಂತ್ರಸ್ತೆ ಇಬ್ಬರೂ ಮಣಿಪಾಲ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದರು.
ಅ.16ರ ರಾತ್ರಿ ನಗರದ ಇಂದ್ರಾಳಿಯ ಫ್ಲ್ಯಾಟ್ವೊಂದರಲ್ಲಿ ಮದ್ಯಸೇವನೆಯ ನಶೆಯಲ್ಲಿ ಗೆಳತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಅ.17ರ ಬೆಳಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.