ದೂರದ ನಕ್ಷತ್ರ ಮಂಡಲಗಳಾಚೆಗೂ ರೇಡಿಯೋ ಸಂಕೇತ: ಬಾಹ್ಯಾಕಾಶದಲ್ಲಿ ಜೀವಿಗಳಿರುವ ಸಾಧ್ಯತೆ?
Thursday, October 14, 2021
ಲಂಡನ್: ವಿಶ್ವದ ಅತ್ಯಂತ ಪ್ರಬಲ ರೇಡಿಯೋ ಆ್ಯಂಟಿನಾವಾಗಿರುವ ನೆದರ್‌ಲ್ಯಾಂಡ್‌ನ ಲೋ ಫ್ರಿಕ್ವಿನ್ಸಿ ಆದ್ರೆ(ಲೋಫಾರ್) ದೂರದ ನಕ್ಷತ್ರ ಮಂಡಲಗಳಿಂದಲೂ ರೇಡಿಯೋ ಸಂಕೇತಗಳನ್ನು ಗ್ರಹಿಸಿರುವುದಾಗಿ ತಿಳಿದುಬಂದಿದೆ.
ಕ್ವಿನ್ಸ್‌ಲ್ಯಾಂಡ್ ವಿವಿ ವಿಜ್ಞಾನಿ ಡಾ.ಬೆಂಜಮಿನ್ ಪೋಪ್ ಹಾಗೂ ನೆದರ್‌ಲ್ಯಾಂಡ್‌ನ ರಾಷ್ಟ್ರೀಯ ಖಗೋಳ ವೀಕ್ಷಣಾಲಯ ಅಸ್ಟೋನ್‌ನ ವಿಜ್ಞಾನಿಗಳು ಈ ರೇಡಿಯೋ ಸಿಗ್ನಲ್‌ಗಳನ್ನು ಪತ್ತೆಹಚ್ಚಿದ್ದಾರೆ. ಈ ವಿಜ್ಞಾನಿಗಳ ಪ್ರಕಾರ ನಕ್ಷತ್ರಗಳ ಸುತ್ತಲೂ ತಿರುಗುತ್ತಿರುವ ಗ್ರಹಗಳಿಂದ ರೇಡಿಯೋ ಸಂಕೇತ ಬಂದಿರಬಹುದೆಂದು ಅವರು ಶಂಕಿಸಿದ್ದಾರೆ.
ರೇಡಿಯೋ ತರಂಗಾಂತರಗಳನ್ನು ಪತ್ತೆಹಚ್ಚುವ ನೂತನ ತಂತ್ರಜ್ಞಾನವು ಬಾಹ್ಯಾಕಾಶ ಕ್ಷೇತ್ರದ ಸಂಶೋಧನೆಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಇದರಿಂದಾಗಿ ನಕ್ಷತ್ರಪುಂಜಗಳಲ್ಲಿರುವ ಗ್ರಹಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಈ ನೂತನ ತಂತ್ರಜ್ಞಾನವು ದೂರದ ನಕ್ಷತ್ರಮಂಡಲಗಳಲ್ಲಿರುವ ಗ್ರಹಗಳಲ್ಲಿ ಜೀವಿಗಳಿರುವ ಸಾಧ್ಯತೆಯ ಬಗ್ಗೆಯೂ ಸುಳಿವು ನೀಡಿದೆ ಎಂದು ಡಾ.ಬೆಂಜಮಿನ್ ಪೋಪ್ ತಿಳಿಸಿದ್ದಾರೆ.