
ಕ್ಯಾಬ್ ಚಾಲಕನೊಂದಿಗಿನ ಕಿರಿಕ್ ಗೆ ಸಂಜನಾ ಸ್ಪಷ್ಟನೆ
Thursday, October 7, 2021
ಬೆಂಗಳೂರು: ಕ್ಯಾಬ್ ಚಾಲಕನೊಂದಿಗೆ ವಾಗ್ವಾದಕ್ಕಿಳಿದು ಕಿರಿಕ್ ಮಾಡಿಕೊಂಡಿದ್ದ ಸ್ಯಾಂಡಲ್ ವುಡ್ ಬೆಡಗಿ ನಟಿ ಸಂಜನಾ ಗರ್ಲಾನಿಯವರು ಆತನನ್ನು ನಿಂದಿಸಿರುವ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಸಂಜನಾ, ಆತ ಎಸಿ ಹಾಕುವುದಿಲ್ಲ ಎಂದು ರೂಡ್ ಆಗಿ ಹೇಳಿದ್ದಾನೆ. ಆದರೆ ಆತ ಕೋವಿಡ್ ನಿಯಮವಿದೆ ಅದಕ್ಕಾಗಿ ಹಾಕೋಲ್ಲವೆಂದು ಎಲ್ಲೂ ಹೇಳಿಕೊಂಡಿಲ್ಲ. ನಾನು ಎಸಿ ಕಾರನ್ನೇ ಬುಕ್ ಮಾಡಿದ್ದೆ.
ಓರ್ವ ಹುಡುಗಿಯಾದ ನನ್ನನ್ನು ಆತ ರಸ್ತೆಯಲ್ಲಿ ನಿಲ್ಲಿಸುತ್ತೇನೆ ಎಂದು ಬೆದರಿಕೆ ಹಾಕಿದಾಗ ಭಯವಾಯ್ತು. ಆದರೂ ಆತನನ್ನು ನಿಂದನೆ ಮಾಡಿಲ್ಲ. ಅಲ್ಲದೆ ಆತ ನಾನು ಹೇಳಿದ ಸ್ಥಳಕ್ಕೆ ತಲುಪಿಸಲು ದುಪ್ಪಟ್ಟು ಮೀಟರ್ ದರ ಕೇಳಿದ್ದಾನೆ. ನಾನು ಅದಕ್ಕೆ ಹೇಳದ್ದೆ 10 ಸಾವಿರ ರೂ. ನೀಡಬೇಕಾ ಎಂದಿದ್ದೆ. ಆದರೂ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಕೇಳಿ ಬರುತ್ತಿದೆ. ಇದೆಲ್ಲಾ ಕಟ್ಟುಕಥೆ ಎಂದಿದ್ದಾರೆ.
ಮಂಗಳವಾರ ಶೂಟಿಂಗ್ ಸ್ಪಾಟ್ ಗೆ ಹೋಗಲು ಓಲಾ ಬುಕ್ ಮಾಡಿ ತೆರಳುತ್ತಿದ್ದೆ. ಆದರೆ ಕ್ಯಾಬ್‌ನಲ್ಲಿ ಎಸಿ ಆನ್ ಮಾಡಿಲ್ಲ ಎಂದು ಟ್ವೀಟ್ ಮಾಡಿ ಆರೋಪಿಸಿದ್ದ ಸಂಜನಾ, ಕಾರ್ ನಂಬರ್ ಕೆಎ 50 8960ದಲ್ಲಿ ಸುಸೈ ಮಣಿ ಎಂಬ ಚಾಲಕನಿದ್ದ. ಬೆಳ್ಳಂಬೆಳಗ್ಗೆಯೇ ಚಾಲಕನಿಂದ ತಾಬು ಕಿರಿಕಿರಿ ಅನುಭವಿಸಿದ್ದೆ. ನಾವು ಕ್ಯಾಬ್‌ನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದೆವು. ಆದರೆ, ಎಸಿ ಹಾಕಿ ಎಂದಾಗ ಕ್ಯಾಬ್ ಡ್ರೈವರ್ ಮೊದಲು ತಕರಾರು ಮಾಡಿದ. ಬಳಿಕ ಕೇವಲ ಒಂದನೇ ಸ್ಪೀಡ್‌ನಲ್ಲಿ ಎಸಿ ಹಾಕಿದ್ದ.
ಎಸಿ ಕಾರ್ ನ ದರವನ್ನೇ ಪಡೆದು ಎಸಿ ಹಾಕಲು ನಿರಾಕರಿಸಿದರೇ ಹೇಗೆ? ಕಾರಿನ ವಿಂಡೋ ಭಾಗವೂ ಸಹ ಮುರಿದು ಹೋಗಿತ್ತು. ಇದರಿಂದ ನಮಗೆ ಉಸಿರುಗಟ್ಟಿದಂತಾಗಿತ್ತು. ಆದ್ದರಿಂದ ಎಸಿ ಜಾಸ್ತಿ ಮಾಡಲು ಕೋರಿದಾಗ ಅವಾಜ್ ಹಾಕಿದ. ಅಲ್ಲದೇ, ದಾರಿ ಮಧ್ಯದಲ್ಲೇ ಇಳಿಸಿ ಬಿಡುತ್ತೇನೆ ಎಂದು ಹೆದರಿಸಿದ ಎಂದು ಆರೋಪಿಸಿದ್ದರು.
ಇನ್ನ ತನ್ನ ವಿರುದ್ಧ ಆರೋಪ ಮಾಡಿದ ನಟಿ ಸಂಜನಾ ವಿರುದ್ಧ ಕ್ಯಾಬ್ ಚಾಲಕ ದೂರು ಕೂಡ ಕೊಟ್ಟಿದ್ದಾನೆ.