
ಒತ್ತಡ ಕಡಿಮೆ ಮಾಡಲು ಪ್ರಿಯಾಂಕಾ 'ಸ್ಕೂಬಾ ಡೈವಿಂಗ್' ಮೊರೆ ಹೋಗುತ್ತಾರಂತೆ!
Thursday, October 21, 2021
ನವದೆಹಲಿ: ಕೆಲಸದ ಒತ್ತಡ ಹೆಚ್ಚಾದಲ್ಲಿ ನಿವಾರಣೆಗೆ ಒಬ್ಬೊಬ್ಬರು ಒಂದೊಂದು ಪರಿಹಾರ ಕಂಡುಕೊಳ್ಳುತ್ತಾರೆ. ಈ ಮೂಲಕ ತಮ್ಮ ಒತ್ತಡ ಕಳೆಯಲು ಪರಿಹಾರ ಮಾಡಿಕೊಳ್ಳುತ್ತಾರೆ. ಆದರೆ ನಟಿ ಪ್ರಿಯಾಂಕಾ ಚೋಪ್ರಾ ಕಂಡುಕೊಂಡ ಪರಿಹಾರವೇನು ಗೊತ್ತಾ?, ಸಮುದ್ರಾಳಕ್ಕೆ ಹೋಗುದಂತೆ ಅಂದರೆ ಅವರು ಸ್ಕೂಬಾ ಡೈವಿಂಗ್ ಮೂಲಕ ಅವರು ಒತ್ತಡ ನಿರ್ವಹಣೆ ಮಾಡಿಕೊಳ್ಳುತ್ತಾರಂತೆ.
ಪ್ರಿಯಾಂಕ ಚೋಪ್ರಾ ಇತ್ತೀಚಿನ ದಿನಗಳಲ್ಲಿ ಸ್ಪೇನ್ನಲ್ಲಿ ‘ಸಿಟಾಡೆಲ್’ ಸರಣಿಯ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ಸಂದರ್ಭ ಸಾಕಷ್ಟು ಒತ್ತಡದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಆದ್ದರಿಂದ ಅವರು ಒತ್ತಡ ಕಡಿಮೆ ಮಾಡಿಕೊಳ್ಳಲು, ಇತ್ತೀಚೆಗೆ ತಮ್ಮ ತಂಡದವರೊಂದಿಗೆ ಸ್ಕೂಬಾ ಡೈವಿಂಗ್ಗೆ ಹೋಗಿದ್ದಾರೆ.
ಈ ಮೂಲಕ ಸಮುದ್ರದೊಳಗೆ ಹಲವು ಸಮಯ ಕಳೆದಿದ್ದಾರಂತೆ. ಈ ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಅದೊಂದು ಅದ್ಭುತ ಅನುಭವ ಎಂದು ಬಣ್ಣಿಸಿದ್ದಾರೆ.