
ಶಬರಿಮಲೆ ಯಾತ್ರೆಗೆ ಹೊಸ ಮಾರ್ಗಸೂಚಿ- ಏನೇನಿದೆ ? ಇಲ್ಲಿ ನೋಡಿ!
Friday, October 8, 2021
ಕೇರಳ: ಪುಣ್ಯಕ್ಷೇತ್ರ ಶಬರಿಮಲೆ ವಾರ್ಷಿಕ ಯಾತ್ರೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರಕಾರ ಹೊಸ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದು ಇದರಂತೆ ಈ ಬಾರಿಯ ಶಬರಿಮಲೆ ಯಾತ್ರೆ ನಡೆಯಲಿದೆ.
1.ಈ ಯಾತ್ರೆಯಲ್ಲಿ ಮೊದಲ ದಿನಗಳಲ್ಲಿ ಒಟ್ಟು 25 ಸಾವಿರ ಜನರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ.
2.ಪಂಬಾ ನದಿಯಲ್ಲಿ ಸ್ನಾನ ಮಾಡಲು ಅನುಮತಿಯನ್ನು ಅಧಿಕಾರಿಗಳು ನೀಡಿದ್ದಾರೆ.
3. ಶಬರಿಮಲೆ ಯಾತ್ರಿಕರನ್ನು ಕರೆದೊಯ್ಯುವ ವಾಹನಗಳಿಗೆ ನಿಲಕ್ಕಲ್ ವರೆಗೆ ಮಾತ್ರ ಅನುಮತಿ ನೀಡಲಾಗಿದೆ
4 ಈ ಬಾರಿಯೂ ಕಳೆದ ವರ್ಷದಂತೆ 'ತುಪ್ಪದ ಅಭಿಷೇಕ' ನಡೆಸಲು ಸರಕಾರ ನಿರ್ಧರಿಸಿದೆ.
5. ದರ್ಶನಕ್ಕಾಗಿ ವರ್ಚುಯಲ್ ಕ್ಯೂ ಸೌಲಭ್ಯವು ಇರಲಿದೆ.