
ಶಾರುಖ್ ಖಾನ್ ಜೊತೆ ನಟಿಸಲು ದೊರಕಿರುವ ಅವಕಾಶ ತಿರಸ್ಕರಿಸಿದ ಸಮಂತಾ: ಕಾರಣ ಇದು?
Wednesday, October 20, 2021
ಹೈದರಾಬಾದ್ (ತೆಲಂಗಾಣ) : ತಾರಾ ದಂಪತಿ ಸಮಂತಾ ಹಾಗೂ ನಾಗಚೈತನ್ಯ ಅವರು ವಿಚ್ಛೇದನ ಪಡೆದ ಬಳಿಕವೂ ಟಾಲಿವುಡ್ನಲ್ಲಿ ಹತ್ತು ಹಲವು ಊಹಾಪೋಹಗಳು ಹರಿದಾಡುತ್ತಿವೆ. ಆದರೆ, ಇಬ್ಬರೂ ತಮ್ಮ ಡಿವೋರ್ಸ್ ಗೆ ಕಾರಣವೇನು ಎಂಬುದನ್ನು ಈವರೆಗೂ ಬಹಿರಂಗವಾಗಿ ಹೇಳಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ನಟಿ ಸಮಂತಾ ಅವರ ಕಾರಣದಿಂದಲೇ ಈ ಸಂಬಂಧ ಮುರಿದು ಬಿತ್ತು ಎಂದು ಬಿಂಬಿಸಲಾಗುತ್ತಿದೆ. ಆದರೆ, ಇದು ಸತ್ಯಕ್ಕೆ ದೂರ ಅನ್ನೋದನ್ನು ಸಮಂತಾ ಆಪ್ತ ಸ್ನೇಹಿತೆಯೊಬ್ಬರು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಸಮಂತಾ ಮಗು ಹೊಂದಲು ಇಚ್ಛಿಸದ ಕಾರಣಕ್ಕೆ ಈ ದಾಂಪತ್ಯ ಸಂಬಂಧ ಮುರಿದು ಬಿತ್ತು
ಎಂಬುದು ಸತ್ಯಕ್ಕೆ ದೂರವಾದ ಮಾತು. ಜಾಲತಾಣಗಳಲ್ಲಿ ಸಮಂತಾ-ನಾಗಚೈತನ್ಯರ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಅಭಿಮಾನಿಗಳು ಕಿವಿಕೊಡಬಾರದು ಎಂದು ಅವರ ಸ್ನೇಹಿತೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಅವರು ಕುಟುಂಬಕ್ಕಾಗಿ ಸಮಂತಾ ತೆಗೆದುಕೊಂಡ ನಿರ್ಧಾರದ ಬಗ್ಗೆಯೂ ಬಹಿರಂಗಪಡಿಸಿದ್ದಾರೆ ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ನಾಯಕನಾಗಿ ನಟಿಸಬೇಕಿದ್ದ 'ಲಯನ್' ಎಂಬ ಬಿಗ್ ಬಜೆಟ್ ಚಿತ್ರದಲ್ಲಿ ಸಮಂತಾಗೆ ಆಫರ್ ಬಂದಿತ್ತು. ಬಿಗಿಲ್, ಮೆರ್ಸಲ್ ಹಾಗೂ ತೇರಿ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಅಟ್ಲೀ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅವರು ಈ ಚಿತ್ರದಲ್ಲಿ ನಟಿದುವಂತೆ ನಾಯಕಿಯಾಗಿ ಸಮಂತಾ ಅವರನ್ನು ಮೊದಲು ಸಂಪರ್ಕ ಮಾಡಿದ್ದರಂತೆ.
ಆದರೆ, ನಾಗ ಚೈತನ್ಯ ಅವರ ಮಗುವಿನ ತಾಯಿ ಆಗಬೇಕು, ಕುಟುಂಬ ಬೆಳೆಯಬೇಕು ಎಂಬ ಉದ್ದೇಶದಿಂದ ಸಮಂತಾ ಈ ಅವಕಾಶವನ್ನು ನಿರಾಕರಿಸಿದ್ದರಂತೆ. ಬಳಿಕ ಈ ಪಾತ್ರಕ್ಕೆ ನಟಿ ನಯನತಾರಾ ಅವರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಚಿತ್ರ ತಂಡ ಯಶಸ್ವಿ ಚಿತ್ರೀಕರಣ ನಡೆಸುತ್ತಿದೆ ಅನ್ನೋದು ಸದ್ಯದ ಮಾಹಿತಿ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಮಾತ್ರ ನಟಿ ಸಮಂತಾ ಆಗಾಗ ಕಿಡಿ ಕಾರುತ್ತಲೇ ಇದ್ದಾರೆ.