-->
ಹುಟ್ಟುಹಬ್ಬದ ದಿನವೇ ಮೆಕ್ಸಿಕೊ ನಗರದಲ್ಲಿ ಡ್ರಗ್ ಪೆಡ್ಲರ್ ಗಳ ಗುಂಡಿನ ದಾಳಿಗೆ ಬಲಿಯಾದ ಭಾರತ ಮೂಲದ ಮಹಿಳೆ

ಹುಟ್ಟುಹಬ್ಬದ ದಿನವೇ ಮೆಕ್ಸಿಕೊ ನಗರದಲ್ಲಿ ಡ್ರಗ್ ಪೆಡ್ಲರ್ ಗಳ ಗುಂಡಿನ ದಾಳಿಗೆ ಬಲಿಯಾದ ಭಾರತ ಮೂಲದ ಮಹಿಳೆ

ಮೆಕ್ಸಿಕೋ: ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆಯೋರ್ವಳನ್ನು ಆಕೆಯ ಹುಟ್ಟಹಬ್ಬದಂದೇ ಎರಡು ಡ್ರಗ್​ ಪೆಡ್ಲಿಂಗ್​ ಗ್ಯಾಂಗ್  ಮೆಕ್ಸಿಕೋದ ತುಲುಮ್​ನಲ್ಲಿರುವ​ ರೆಸ್ಟೋರೆಂಟ್​ ನಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದೆ. 

ಟೆಕ್ಕಿ ಹಾಗೂ ಟ್ರ್ಯಾವೆಲ್​ ಬ್ಲಾಗರ್​ ಅಂಜಲಿ ರಯೋಟ್ ಹತ್ಯೆಯಾದವರು‌‌‌. ಈಕೆ ತನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಾರ್ಟಿ ಮಾಡಲೆಂದು ರೆಸ್ಟೋರೆಂಟ್​ಗೆ ತೆರಳಿದ್ದರು ಈ ಸಂದರ್ಭದಲ್ಲಿ  ಭೀಕರ ಹತ್ಯೆಯಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಕ್ಯಾಲಿಫೋರ್ನಿಯಾದ ಸ್ಯಾನ್​ ಜೋಸ್​ ಎಂಬಲ್ಲಿ ನೆಲೆಸಿದ್ದ ಅಂಜಲಿ ರಯೋಟ್ ಹೊಟೇಲ್ ಹೋಗಿದ್ದಾಗ ಆಕೆಯೊಂದಿಗೆ ಜರ್ಮನ್​ ಪ್ರವಾಸಿಗ ಜೆನ್ನಿಫರ್​ ಹೆಂಜೋಲ್ಡ್​ ಅನ್ನು ಡ್ರಗ್​ ಪೆಡ್ಲಿಂಗ್​ ಗ್ಯಾಂಗ್​ ಗುಂಡಿನ ದಾಳಿಯಲ್ಲಿ ಹತ್ಯೆ ಮಾಡಿದೆ. 

ಅಂಜಲಿ‌ ರಯೋಟ್ ಇನ್​ಸ್ಟಾಗ್ರಾಂ ಮಾಹಿತಿ ಪ್ರಕಾರ ಆಕೆ ಹಿಮಾಚಲ ಪ್ರದೇಶದ ಟ್ರ್ಯಾವೆಲ್​ ಬ್ಲಾಗರ್​. ಪ್ರಸ್ತುತ ಆಕೆ ಸ್ಯಾನ್​ ಜೋಸ್​ನಲ್ಲಿ ನೆಲೆಸಿರುವುದಾಗಿ ಬರೆದುಕೊಂಡಿದ್ದಾರೆ. ಅಂಜಲಿ ಜುಲೈನಿಂದ ಲಿಂಕ್ಡ್‌ಇನ್‌ನಲ್ಲಿ ವಿಶ್ವಾಸಾರ್ಹ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಇದಕ್ಕೂ ಮೊದಲು ಯಾಹೂವಿನಲ್ಲಿ ಕೆಲಸ ಮಾಡಿದ್ದರು. 

ಅ.22ರಂದು ರಾತ್ರಿ 10.30 ರ ಸುಮಾರಿಗೆ, ಅಂಜಲಿ ಮತ್ತು ಇತರ ನಾಲ್ವರು ಪ್ರವಾಸಿಗರು ಲಾ ಮಲ್ಕ್ವೆರಿಡಾ ರೆಸ್ಟೋರೆಂಟ್‌ನ ಟೆರೇಸ್‌ನಲ್ಲಿ ಊಟ ಮಾಡುತ್ತಿದ್ದರು. ಆಗ ರೈಫಲ್‌ಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದ ನಾಲ್ವರು, ರೆಸ್ಟೋರೆಂಟ್​ ಆವರಣದ ಪಕ್ಕದ ಮೇಜಿನ ಮೇಲೆ ಗುಂಡು ಹಾರಿಸಿದ್ದಾರೆ. ಈ ದಾಳಿಯಲ್ಲಿ ಬುಲೆಟ್​ಗಳು ಅಂಜಲಿ ಮತ್ತು ಜೆನ್ನಿಫರ್​ಗೆ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದರಲ್ಲಿ ಜರ್ಮನಿ ಹಾಗೂ ನೆದರ್​ಲ್ಯಾಂಡ್ ನ ಮೂವರು ಗಾಯಗೊಂಡಿದ್ದಾರೆ ಎಂದು ಸ್ಪ್ಯಾನಿಷ್ ಪತ್ರಿಕೆ ಎಲ್ ಪಾಯಿಸ್ ವರದಿ ಮಾಡಿದೆ.

ಡ್ರಗ್​ ಪೆಡ್ಲರ್​ ಗ್ಯಾಂಗ್​ಗಳ ನಡುವಿನ ಪರಸ್ಪರ ದಾಳಿಯಲ್ಲಿ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಈ ಪ್ರದೇಶದಲ್ಲಿ ಎರಡು ಡ್ರಗ್​ ಪೆಡ್ಲಿಂಗ್​ ಗ್ಯಾಂಗ್​ಗಳು ಸಕ್ರಿಯವಾಗಿವೆ. ಅಲ್ಲದೆ, ಮೆಕ್ಸಿಕನ್ ರಾಜ್ಯದಲ್ಲಿ ಹಲವಾರು ಡ್ರಗ್ ಕಾರ್ಟೆಲ್‌ಗಳು ಸಹ ಕಾರ್ಯನಿರ್ವಹಿಸುತ್ತಿವೆ. ಇದು ಲಾಭದಾಯಕ ಚಿಲ್ಲರೆ ಔಷಧ ಮಾರುಕಟ್ಟೆಗೆ ಹೆಸರುವಾಸಿಯಾಗಿದೆ ಮತ್ತು ಔಷಧ ಸಾಗಣೆಯ ಹಾಟ್ ಸ್ಪಾಟ್ ಆಗಿದ್ದು, ಗುಂಡಿನ ದಾಳಿ ಸಾಮಾನ್ಯವಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಅಂಜಲಿಯ ಮೃತಪಟ್ಟಿರುವ ಬಗ್ಗೆ ತಿಳಿಯುತ್ತಿದ್ದಂತೆ ಹಿಮಾಚಲ ಪ್ರದೇಶದಲ್ಲಿದ್ದ ಅವರ ಕುಟುಂಬ ಆಘಾತಕ್ಕೆ ಒಳಗಾಗಿದೆ. ಆಕೆಯ ಮೃತದೇಹವನ್ನು ಮರಳಿ ತರುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಆಕೆಯ ಸಹೋದರ ಆಶಿಶ್ ತುಳುಮ್ ಸ್ಥಳೀಯ ಜನಪ್ರತಿನಿಧಿಯನ್ನು ಒತ್ತಾಯಿಸಿದ್ದಾರೆ. ಕಳೆದ ವರ್ಷ ಕೊರೊನಾ ಸೋಂಕಿನ ಸಮಯದಲ್ಲಿ ಅಂಜಲಿ ತಮ್ಮ ಕುಟುಂಬದೊಂದಿಗೆ ಸೋಲನ್‌ನಲ್ಲಿ ಮೂರು-ನಾಲ್ಕು ತಿಂಗಳುಗಳನ್ನು ಕಳೆದಿದ್ದರು. ಅಂಜಲಿ ಮತ್ತು ಅವರ ಪತಿ ಉತ್ಕರ್ಷ್ ಶ್ರೀವಾಸ್ತವ್ ಅಕ್ಟೋಬರ್ 22 ರಂದು ಸ್ಯಾನ್ ಜೋಸ್‌ನಿಂದ 30 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ಮೆಕ್ಸಿಕೊ ನಗರಕ್ಕೆ ಹೋಗಿದ್ದರು ಎಂದು ಆಕೆಯ ತಂದೆ ಹೇಳಿದ್ದಾರೆ. 

Ads on article

Advertise in articles 1

advertising articles 2

Advertise under the article