ವೈಯುಕ್ತಿಕ ವಿಚಾರದಿಂದ ಸುದ್ದಿಯಲ್ಲಿರುವ ನಟಿ ಶ್ರೀಲೀಲಾ: ಆಕೆ ಡಿವೋರ್ಸ್ ಬಳಿಕ ಪತ್ನಿಗೆ ಹುಟ್ಟಿದ್ದವಳು ಎಂದ ಉದ್ಯಮಿ
Monday, October 18, 2021
ಹೈದರಾಬಾದ್: ಕಿಸ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ನೀಡಿ ಮೊದಲ ಸಿನಿಮಾದಲ್ಲೇ ಕನ್ನಡಿಗರ ಮನಗೆದ್ದಿರುವ ನಟಿ ಶ್ರೀಲೀಲಾ, ಇತ್ತೀಚಿಗೆ ತೆರೆಕಂಡಿರುವ 'ಪೆಳ್ಳಿಸಂದ ಡಿ' ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೂ ಪಾದರ್ಪಣೆ ಮಾಡಿದ್ದಾರೆ.
'ಪೆಳ್ಳಿಸಂದ ಡಿ' ಸಿನಿಮಾ ಒಳ್ಳೆಯ ಗಳಿಕೆ ಪಡೆಯುತ್ತಿದ್ದು, ಶ್ರೀಲೀಲಾರ ಬ್ಯೂಟಿ ಮತ್ತು ಡ್ಯಾನ್ಸ್ಗೆ ತೆಲುಗು ಸಿನಿಮಾ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ನಡುವೆ ಶ್ರೀಲೀಲಾ ಇದೀಗ ತಮ್ಮ ವೈಯುಕ್ತಿಕ ವಿಚಾರದಿಂದ ಭಾರೀ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ಶ್ರೀಲೀಲಾ ತೆಲುಗಿನ ಖ್ಯಾತ ಉದ್ಯಮಿ ಸೂರಪನೇನಿ ಸುಭಾಕರ ರಾವ್ ಮಗಳು ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳನ್ನು ಗಮನಿಸಿದ ಸುಭಾಕರ ರಾವ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, "ಶ್ರೀಲೀಲಾ ತನ್ನ ಮಗಳಲ್ಲ. ನನಗೆ ಪತ್ನಿಯ ಜತೆ ವಿಚ್ಛೇದನವಾದ ಬಳಿಕ ಆಕೆ ಶ್ರೀಲೀಲಾಗೆ ಜನ್ಮ ನೀಡಿದ್ದಾಳೆ. ವಿಚ್ಛೇದನ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇದೆ. ನಾನು ಶ್ರೀಲೀಲಾ ತಂದೆಯಲ್ಲ. ಆದರೆ ಆಕೆ ಮಾತ್ರ ಮಾಧ್ಯಮಗಳ ಸಂದರ್ಶನದಲ್ಲಿ ನನ್ನ ಹೆಸರು ಬಳಸುತ್ತಿದ್ದಾಳೆ. ನನ್ನ ಆಸ್ತಿಯಲ್ಲಿ ಪಾಲು ಕೇಳಲೆಂದೆ ನನ್ನ ಹೆಸರು ಉಲ್ಲೇಖಿಸುತ್ತಿದ್ದಾರೆಂದು" ಅವರು ಆರೋಪಿಸಿದ್ದಾರೆ.
ಉದ್ಯಮಿ ಸುಭಾಕರ ರಾವ್ ನೀಡಿರುವ ಹೇಳಿಕೆಗೆ ಶ್ರೀಲೀಲಾವಾಗಲೀ ಅವರ ತಾಯಿಯಾಗಲೀ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರಿಬ್ಬರೂ ಈ ಹೇಳಿಕೆಯ ಬಗ್ಗೆ ಏನು ಹೇಳುತ್ತಾರೆ ಎಂಬುದು ಕುತೂಹಲ ಸೃಷ್ಟಿಸಿದೆ.
ಇನ್ನು ಶ್ರೀಲೀಲಾ ಸಿನಿಮಾ ವಿಚಾರಕ್ಕೆ ಬಂದರೆ, ನಿರ್ದೇಶಕ ಎ.ಪಿ. ಅರ್ಜುನ್ 'ಕಿಸ್' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶ ಪಡೆದಿದ್ದು, ಮೊದಲ ಸಿನಿಮಾಲ್ಲಿಯೇ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಬಳಿಕ ಅವರು ಶ್ರೀ ಮುರುಳಿ ಜತೆ ಭರಾಟೆ ಚಿತ್ರದಲ್ಲಿ ನಟಿಸಿದರು. ಇದೀಗ ಶ್ರಿಲೀಲಾ ಇತ್ತೀಚಿಗೆ ತೆರೆಕಂಡಿರುವ 'ಪೆಳ್ಳಿಸಂದ ಡಿ' ಸಿನಿಮಾ ಮೂಲಕ ಟಾಲಿವುಡ್ಗೂ ಎಂಟ್ರಿ ಕೊಟ್ಟಿದ್ದಾರೆ.