
Naga Chaithanya Divorce to Samantha- ಸಮಂತಾ-ನಾಗ ಚೈತನ್ಯ ದಾಂಪತ್ಯ ಅಂತ್ಯ: ವಿಚ್ಚೇದನ ಘೋಷಿಸಿದ ತಾರಾ ದಂಪತಿ
ಸಮಂತಾ-ನಾಗ ಚೈತನ್ಯ ದಾಂಪತ್ಯ ಅಂತ್ಯ: ವಿಚ್ಚೇದನ ಘೋಷಿಸಿದ ತಾರಾ ದಂಪತಿ
ತೆಲುಗಿನ ಸ್ಟಾರ್ ನಟ, ನಾಗಾರ್ಜುನ ಪುತ್ರ ನಾಗಚೈತನ್ಯ ಮತ್ತು ಖ್ಯಾತ ನಟಿ ಸಮಂತಾ ನಟಿ ದಾಂಪತ್ಯ ಕೊನೆಗೂ ಮುರಿದುಬಿದ್ದಿದೆ. ನಾಲ್ಕು ವರ್ಷಗಳ ದಾಂಪತ್ಯ ಹಾಗೂ 10 ವರ್ಷಗಳ ಸ್ನೇಹಕ್ಕೆ ಪೂರ್ಣಬಿಂದು ಹಾಕುವ ಘೋಷಣೆಯನ್ನು ನಾಗಚೈತನ್ಯ ಮಾಡಿದ್ದಾರೆ.
ಟ್ವಿಟ್ಟರ್ ನಲ್ಲಿ ಈ ವಿಷಯ ಪ್ರಕಟಿಸಿದ ನಾಗ ಚೈತನ್ಯ, ಸಾಕಷ್ಟು ಆಲೋಚನೆ ಬಳಿಕ ಸಮಂತಾ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಸ್ವಂತ ದಾರಿಯಲ್ಲಿ ಸಾಗಲು ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ.
ಸ್ನೇಹ ನಮ್ಮ ಸಂಬಂಧದ ತಳಹದಿ. ದಶಕದ ಸ್ನೇಹವನ್ನು ಅನುಭವಿಸಲು ನಾವು ಅದೃಷ್ಟಸಾಲಿಯಾಗಿದ್ದೆವು. ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು ಎಂದು ಅವರು ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.
ನಮ್ಮ ಖಾಸಗಿತನವನ್ನು ಗೌರವಿಸಬೇಕು ಎಂದು ಅವರು ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. 2017ರಲ್ಲಿ ಈ ತಾರಾ ಜೋಡಿ ಹಸೆಮಣೆ ಏರಿತ್ತು.
ಇನ್ನೊಂದೆಡೆ, ಸಮಂತಾ ಕೂಡ ಇನ್ಸ್ಟಗ್ರಾಂ ಮೂಲಕ ನಾಗಚೈತನ್ಯ ಹಾಕಿರುವ ಪೋಸ್ಟನ್ನೇಹಾಕಿ ವಿಚ್ಚೇದನವನ್ನು ಖಚಿತಪಡಿಸಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂದು ವದಂತಿ ಚಿತ್ರರಂಗದಲ್ಲಿ ಹರಿದಾಡುತ್ತಿತ್ತು.