ದಸರಾಕ್ಕೆ ಪತಿ ಮನೆಗೆ ಬರಲಿಲ್ಲ: ಮನನೊಂದ ಪತ್ನಿ ಆತ್ಮಹತ್ಯೆ
Saturday, October 16, 2021
ನಲ್ಗೊಂಡ: ದಸರಾ ಹಬ್ಬಕ್ಕೆ ಪತಿ ಮನೆಗೆ ಬರಲಿಲ್ಲವೆಂದು ಪತ್ನಿಯೋರ್ವಳು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅಮಂಗಲ್ಲು ಮೆಡಿಗಡ್ಡದಲ್ಲಿ ನಡೆದಿದೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅಮಂಗಲ್ಲು ಮೆಡಿಗಡ್ಡ ನಿವಾಸಿ ಅನಿಲ್ ಎಂಬವರ ಪತ್ನಿ ವಿದ್ಯಾವತ್ ಮೌನಿಕಾ( 20 ) ಮೃತ ಯುವತಿ.
ವಿದ್ಯಾವತ್ ಮೌನಿಕಾ ತಮ್ಮ ಮಾವನ ಮಗನಾದ ಅನಿಲ್ ಎಂಬವರನ್ನು ಆರು ತಿಂಗಳ ಹಿಂದೆ ವಿವಾಹವಾಗಿದ್ದರು. ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ ಅನಿಲ್ ಹಾಗೂ ವಿದ್ಯಾವತ್ ಮೌನಿಕಾ ಒಂದೇ ಗ್ರಾಮದವರಾಗಿದ್ದಾರೆ.
ಚಾಲಕ ವೃತ್ತಿಯ ಪರಿಣಾಮ ಬೇರೆ ಊರಿಗೆ ಹೋಗಿದ್ದರಿಂದ ಅನಿಲ್ ಗೆ ಮನೆಗೆ ಬರಲು ಸಾಧ್ಯವಾಗಿರಲಿಲ್ಲ. ಪರಿಣಾಮ ಮನನೊಂದ ವಿದ್ಯಾವತ್ ಮೌನಿಕಾ ತೋಟಕ್ಕೆ ತೆರಳಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ವಿಷ ಸೇವಿಸಿ ನರಳಾಡುತ್ತಿದ್ದರುವುದನ್ನು ಕಂಡು ಸ್ಥಳೀಯರು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದದ್ದರು. ಆದರೆ, ಅದಾಗಲೇ ವಿದ್ಯಾವತ್ ಮೌನಿಕಾ ಮೃತಪಟ್ಟಿರುವುದಾಗಿ ವೈದ್ಯರು ಘೊಷಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿದಿರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.