-->
ಭೋಪಾಲ್ ನಲ್ಲಿ ನಡೆಯಿತು ನೈತಿಕ ಪೊಲೀಸ್ ಗಿರಿ- ದಾರಿ ಮಧ್ಯೆ ಯುವತಿಯ ಬುರ್ಕಾ‌ ತೆಗೆಸಿದ ದುಷ್ಕರ್ಮಿಗಳು! ( VIRAL VIDEO)

ಭೋಪಾಲ್ ನಲ್ಲಿ ನಡೆಯಿತು ನೈತಿಕ ಪೊಲೀಸ್ ಗಿರಿ- ದಾರಿ ಮಧ್ಯೆ ಯುವತಿಯ ಬುರ್ಕಾ‌ ತೆಗೆಸಿದ ದುಷ್ಕರ್ಮಿಗಳು! ( VIRAL VIDEO)


ಮಧ್ಯಪ್ರದೇಶ: ಮಧ್ಯಪ್ರದೇಶ ದ ಭೋಪಾಲ್ ನಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದ್ದು ಸ್ಕೂಟರ್ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಯುವತಿಯ ಬುರ್ಕಾವನ್ನು ದುಷ್ಕರ್ಮಿಗಳು ತೆಗೆಸಿದ್ದಾರೆ.

 

ಭೋಪಾಲ್​ನ ಇಸ್ಲಾಂನಗರ ಎಂಬಲ್ಲಿ ಈ ಘಟನೆ ನಡೆದಿದೆ. ಯುವತಿ ಬುರ್ಕಾ  ಧರಿಸಿ ಓರ್ವ ಯುವಕನೊಂದಿಗೆ ಸ್ಕೂಟರ್​ನಲ್ಲಿ ತೆರಳುತ್ತಿದ್ದ  ವೇಳೆ  ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ.

ಹಿಂದೂ ಧರ್ಮೀಯ ಯುವಕನೊಂದಿಗೆ ಆಕೆ ತೆರಳುತ್ತಿದ್ದಾಳೆ ಎಂದು ಆಕೆಯು ಧರಿಸಿದ್ದ ಬುರ್ಕಾ ತೆಗೆಯುವಂತೆ ಅವರು ಒತ್ತಾಯ ಮಾಡಿದ್ದಾರೆ.


ಯುವತಿಯು  ಬುರ್ಕಾ ತೆಗೆಯಲು ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ಈ ವೇಳೆ  ದುಷ್ಕರ್ಮಿಯೊಬ್ಬ 'ಈ ಮಹಿಳೆ ನಮ್ಮ ಸಮುದಾಯಕ್ಕೆ ಅವಮಾನ ಮಾಡಿದ್ದಾಳೆ  ಎಂದು ಹೇಳುತ್ತಿರುವುದು ಕೇಳಿಸಿದೆ.


ಇದರ ವಿಡಿಯೋ ವೈರಲ್ ಆಗಿದ್ದು ಇಬ್ಬರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸಲಾಗಿದ್ದು ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಭೋಪಾಲ್ ಪೊಲೀಸ್ ಅಧಿಕಾರಿ ಆರ್.ಎಸ್.ವರ್ಮಾ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article