ಓರ್ವನನ್ನು ಕೊಂದು, ಇಬ್ಬರನ್ನು ಗಾಯಗೊಳಿಸಿದ್ದ 'ಸಲಗ' ಸೆರೆ: ಬರೋಬ್ಬರಿ 10 ದಿನಗಳ ಕಾರ್ಯಾಚರಣೆ
Thursday, November 4, 2021
ಕೇಂದ್ರಪಾರಾ: ಒಡಿಶಾ ರಾಜ್ಯದಲ್ಲಿ ಓರ್ವನನ್ನು ಕೊಂದು ಇಬ್ಬರನ್ನು ಗಾಯಗೊಳಿಸಿರುವ ಆನೆಯೊಂದನ್ನು ನಿರಂತರ 10 ದಿನಗಳ ಕಾರ್ಯಾಚರಣೆ ಬಳಿಕ ಅರಣ್ಯ ಇಲಾಖೆ ಬುಧವಾರ ಸೆರೆ ಹಿಡಿದಿದೆ.
ಈ ಆನೆಯು ಕಳೆದ ಹತ್ತು ದಿನಗಳಲ್ಲಿ ಒಡಿಶಾದ ನಾಲ್ಕು ಜಿಲ್ಲೆಗಳಲ್ಲಿ 300 ಕಿ.ಮೀ.ಗಳಿಗಿಂತಲೂ ಹೆಚ್ಚು ಕಡೆಗಳಲ್ಲಿ ಸುತ್ತಾಟ ನಡೆಸಿದೆ. ಈ ಮೂಲಕ ಈ ವಯಸ್ಕ ಆನೆಯು ಜನರಲ್ಲಿ ಭೀತಿ ಮೂಡಿಸಿತ್ತು. ಇದೀಗ 10 ದಿನಗಳ ಕಾರ್ಯಾಚರಣೆಯ ಬಳಿಕ ಅರಣ್ಯ ಸಿಬ್ಬಂದಿಯು ಆನೆಯನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನೆ ಸೆರೆಯಾದ ಭಾರೀ ಜನಸ್ತೋಮ ಸೇರಿ ಕಾರ್ಯಾಚರಣೆಯನ್ನು ವೀಕ್ಷಿಸಿತ್ತು.
ಮಹಾಕಲಪದ ಸೊಬಲಾ ಗ್ರಾಮದ ಹೊಲದಲ್ಲಿ ಆನೆಯನ್ನು ಶಾಂತಗೊಳಿಸಿದ ಬಳಿಕ ಅರಣ್ಯ ಇಲಾಖೆಯು ಸೆರೆಹಿಡಿಯಲಾಗಿದೆ ಎಂದು ಕಟಕ್ ಪ್ರಾದೇಶಿಕ ಅರಣ್ಯ ವಿಭಾಗದ ಡಿಎಫ್‌ಒ ಸಂಜಯ್ ಕುಮಾರ್ ಸ್ವೈನ್ ತಿಳಿಸಿದ್ದಾರೆ.