-->
16 ದಿನಗಳ ಹಿಂದಷ್ಟೇ ಹಸೆಮಣೆಯೇರಿದ್ದ ನವವಿವಾಹಿತೆ ದುರಂತ ಅಂತ್ಯ: ಬಾತ್ ರೂಂನೊಳಗೆ ಆದದ್ದೇನು?

16 ದಿನಗಳ ಹಿಂದಷ್ಟೇ ಹಸೆಮಣೆಯೇರಿದ್ದ ನವವಿವಾಹಿತೆ ದುರಂತ ಅಂತ್ಯ: ಬಾತ್ ರೂಂನೊಳಗೆ ಆದದ್ದೇನು?

ಗುಂಟೂರು: ವಿವಾಹವಾಗಿ ಕೇವಲ 16 ದಿನಗಳಲ್ಲೇ ನವವಿವಾಹಿತೆಯೋರ್ವಳು ನೇಣಿಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ. 

ಗುಂಟೂರಿನ ರೆಪಲ್ಲಿ ವಲಯದ ಎಡುಪಲ್ಲಿ ಗ್ರಾಮದ ನಿವಾಸಿ ಚೈತನ್ಯ (19) ಮೃತ ನವವಿವಾಹಿತೆ.

ಚೈತನ್ಯ ವಿವಾಹವು 16 ದಿನಗಳ ಹಿಂದಷ್ಟೇ ಗುಂಟೂರು ಗ್ರಾಮೀಣ ವಲಯದ ದಾಸರಿಪಲೇಮ್​ ಗ್ರಾಮದ ಕೋಟಿ ಸಂಬಿರೆಡ್ಡಿ ಎಂಬಾತನೊಂದಿಗೆ ನಡೆದಿತ್ತು. ಸಂಬಿರೆಡ್ಡಿ ಹೈದರಾಬಾದ್​ ಸಾಫ್ಟ್​ವೇರ್​ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ. ಪ್ರಸ್ತುತ ವರ್ಕ್​ ಫ್ರಮ್​ ಹೋಮ್​ ಮಾಡುತ್ತಿದ್ದ ಎನ್ನಲಾಗಿದೆ. 

ಹಬ್ಬವಿದ್ದುದರಿಂದ 16 ದಿನಗಳ ಕಾಲ ತವರು ಮನೆಯಲ್ಲಿದ್ದ ಚೈತನ್ಯಳನ್ನು 2 ದಿನಗಳ ಹಿಂದೆ ದಾಸರಿಪಲೇಮ್​ ಗ್ರಾಮದ ಅತ್ತೆಯ ಮನೆಗೆ ತವರು ಮನೆಯವರು ಬಿಟ್ಟು ಬಂದಿದ್ದರು. ಒಂದು ದಿನ ಮಗಳೊಂದಿಗೆ ಉಳಿದಿದ್ದ ತಾಯಿ ಸೋಮವಾರ ಮಧ್ಯಾಹ್ನ ತಮ್ಮ ಮನೆಗೆ ಹಿಂತಿರುಗಿದ್ದರು. 

ತಾಯಿ ಹೊರಟ ಕೆಲವೇ ಗಂಟೆಗಳಲ್ಲಿ ಟಿವಿ ನೋಡುತ್ತಾ ಕುಳಿತಿದ್ದ ಚೈತನ್ಯ ಎದ್ದು ಬಾತ್​ರೂಮ್​ಗೆ ತೆರಳಿದ್ದಾಳೆ. ಆದರೆ ಸಾಕಷ್ಟು ಸಮಯದವರೆಗೂ ಆಕೆ ವಾಪಸ್​ ಬರದಿದ್ದನ್ನು ನೋಡಿ ಅತ್ತೆ ಮನೆಯವರು ಹೋಗಿ ಬಾತ್​ರೂಮ್​ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಇರಲಿಲ್ಲ.‌ ಬಳಿಕ ಬಾತ್​ರೂಮ್​ ಬಾಗಿಲು ಒಡೆದು ನೋಡಿದಾಗ ಆಕೆ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದು ಅತ್ತೆ ಮನೆಯವರು ತಿಳಿಸಿದ್ದಾರೆ. 

ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಮದುವೆಯ ಕಳೆಯಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ಚೈತನ್ಯಳ ಮನೆಯವರು ಆಕೆಯ ಪತಿ ಹಾಗೂ ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. ಅದನ್ನು ಸಹಿಸದೇ ಚೈತನ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಆರೋಪಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Ads on article

Advertise in articles 1

advertising articles 2

Advertise under the article