
ಮಂಗಳೂರಿನಲ್ಲಿ ಗೂಡ್ಸ್ ರೈಲಿನ ಮೇಲೇರಿ ಸೆಲ್ಪಿ ತೆಗೆಯಲು ಹೋದ 21 ವರ್ಷದ ಯುವಕನಿಗೆ ಕರೆಂಟ್ ಶಾಕ್!
Tuesday, November 23, 2021
ಮಂಗಳೂರು: ನಿಂತಿದ್ದ
ಗೂಡ್ಸ್ ರೈಲಿನ ಮೇಲೇರಿ ಸೆಲ್ಪಿ ತಯೆಗೆಯಲು ಹೋಗಿ ಯುವಕನೊಬ್ಬನಿಗೆ ಎಲೆಕ್ಟ್ರಿಕ್ ಶಾಕ್ ಹೊಡೆದ ಘಟನೆ
ಸುರತ್ಕಲ್ ನಲ್ಲಿ ನಡೆದಿದೆ.
ಸುರತ್ಕಲ್ ರೈಲ್ವೆ
ನಿಲ್ದಾಣದ ಬಳಿಯ ಅಗರಮೇಲು ಎಂಬಲ್ಲಿ ಸಂಜೆ ಈ ಘಟನೆ
ನಡೆದಿದ್ದು ಘಟನೆಯಲ್ಲಿ ಸಲಾನ್ ಪಾರಸ್ ಎಂಬ 21 ವರ್ಷದ ಯುವಕನಿಗೆ ವಿದ್ಯುತ್ ಅಘಾತವಾಗಿದೆ.
ಸುರತ್ಕಲ್ ರೈಲ್ವೆ ನಿಲ್ದಾಣದ ಬಳಿ ಹಳಿಯನ್ನು ವಿದ್ಯುದ್ದೀಕರಣ ಮಾಡಲಾಗಿದೆ.
ಇಲ್ಲಿ ಹೈ ವೋಲ್ಟೇಜ್ ತಂತಿಗಳು ಇದ್ದು ಯುವಕ ಇದರ ಮಾಹಿತಿ ಇಲ್ಲದೆ ಸೆಲ್ಪಿ ತೆಗೆಯಲು ಹೋಗಿದ್ದಾನೆ. ಸೆಲ್ಪಿ ತೆಗೆಯುವ ವೇಳೆ ಹೈ ವೋಲ್ಟೇಜ್ ತಂತಿ ತಗುಲಿ ವಿದ್ಯುತ್ ಶಾಕ್ ಹೊಡೆದು ಭಾಗಶ
ಸುಟ್ಟು ಹೋಗಿದ್ದಾನೆ. ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ