
ಬಂಟ್ವಾಳದಲ್ಲಿ 24 ವರ್ಷದ ಯುವತಿ ಕೆರೆಗೆ ಬಿದ್ದು ಸಾವು!
Friday, November 26, 2021
ಮಂಗಳೂರು; 24 ವರ್ಷದ ಯುವತಿಯೋರ್ವಳು ಅಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕಾರಾಜೆ ಎಂಬಲ್ಲಿ ಈ ದುರ್ಘಟನೆ ನಡೆದಿದೆ.ಸಜೀಪ ಮೂಡ ಗ್ರಾಮದ ಕಾರಾಜೆ ನಿವಾಸಿ ಲಿಂಗಪ್ಪ ಮೂಲ್ಯರ ಪುತ್ರಿ ರಶ್ಮಿತ (24) ಸಾವನ್ನಪ್ಪಿದ ಯುವತಿ.
ಈಕೆ ಇಂದು ಬೆಳಿಗ್ಗೆ ದೇವರಿಗೆ ಪೂಜೆ ಗಾಗಿ ಹೂ ಕೊಯ್ಯಲು ಹೋಗಿದ್ದ ವೇಳೆ ಕಾಲು ಜಾರಿ ಕೆರೆಗೆ ಬಿದ್ದಿದ್ದಾಳೆ. ಕೆರೆಯಲ್ಲಿ ಬಿದ್ದ ರಶ್ಮಿತ ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.