ಮಂಗಳೂರಿನಲ್ಲಿ ಕುಡುಪು ದೇವಸ್ಥಾನಕ್ಕೆ ಹೊರಟ 28 ವರ್ಷದ ಯುವತಿ ನಾಪತ್ತೆ
Thursday, November 18, 2021
ಮಂಗಳೂರು: ನಗರದ ಕುಡುಪು ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೊರಟ ಯುವತಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರು ತಾಲೂಕು, ಬಡಗ ಎಡಪದವು ಗ್ರಾಮದ, ಪೂಪಾಡಿ ಕಲ್ಲು ಕರೆಂಕಿ ಸೈಟ್ ಎಂಬಲ್ಲಿನ ಹೇಮಾವತಿ ದೇವಾಡಿಗ ಎಂಬವರ ಕಿರಿಯ ಮಗಳು ಸಂಗೀತಾ (28) ಎಂಬವರು ಬಿಗ್ ಬ್ಯಾಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ನವೆಂಬರ್ 16ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ತಮ್ಮ ಮನೆಯಿಂದ ಕುಡುಪು ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವವರು ವಾಪಸ್ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಸಂಗೀತಾರನ್ನು ಪತ್ತೆ ಮಾಡಿ ಕೊಡಬೇಕಾಗಿ ಆಕೆಯ ತಾಯಿ ಹೇಮಾವತಿ ದೇವಾಡಿಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಪತ್ತೆಯಾದವರ ಚಹರೆ: ಸಂಗೀತಾ 4 ಅಡಿ ಎತ್ತರವಿದ್ದು ಸಪೂರ ಶರೀರ, ಬಿಳಿ ಮೈ ಬಣ್ಣ ಹೊಂದಿದ್ದಾರೆ. ಮನೆಯಿಂದ ಹೊರಟಾಗ ಸಂಗೀತಾ ಪಿಂಕ್ ಕಲರ್ ಚೂಡಿದಾರ್ ಟಾಪ್ ಹಾಗೂ ನೀಲಿ ಕಲರಿನ ಪ್ಯಾಂಟ್ ಧರಿಸಿರುತ್ತಾರೆ. ಸಂಗೀತಾ ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಗೊತ್ತಾದವರು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ.