ಪಟಾಕಿ ತಂದ ಆಪತ್ತು: ಲೇಡೀಸ್ ಟೈಲರ್ ಅಂಗಡಿ ಬೆಂಕಿಗಾಹುತಿ, 4ಲಕ್ಷ ರೂ. ಸೊತ್ತು ಕಳೆದುಕೊಂಡು ಕಣ್ಣೀರು ಸುರಿಸುತ್ತಿರುವ ಮಾಲಕರು
Saturday, November 6, 2021
ದೊಡ್ಡಬಳ್ಳಾಪುರ: ಪಟಾಕಿ ಹೊಡೆಯುತ್ತಿದ್ದಾಗ ಕಿಡಿ ಹಾರಿ ಲೇಡಿಸ್ ಟೈಲರ್ ಅಂಗಡಿಯೊಂದು ಸಂಪೂರ್ಣ ಭಸ್ಮಗೊಂಡ ಘಟನೆ ದೊಡ್ಡಬಳ್ಳಾಪುರ ಜಿಲ್ಲೆಯ ಬಾಶೆಟ್ಟಿ ಹಳ್ಳಿಯ ವಿನಾಯಕ ನಗರದಲ್ಲಿ ನಡೆದಿದೆ.
ಸ್ಥಳೀಯ ವೇಣುಗೋಪಾಲ್ ಎನ್ನುವವರು ರಾತ್ರಿ ವೇಳೆ ಟೈಲರ್ ಅಂಗಡಿ ಮುಂದೆ ಪಟಾಕಿ ಸಿಡಿಸುತ್ತಿದ್ದರು. ಆಗ ಬೆಂಕಿ ಕಿಡಿಯೊಂದು ಅಂಗಡಿಗೆ ಹಾರಿದೆ ಎನ್ನಲಾಗಿದೆ. ಆ ಬಳಿಕ ಅಂಗಡಿ ಹೊತ್ತಿ ಉರಿಯಲಾರಂಭಿಸಿದೆ. ಬೆಂಕಿ ಉರಿಯುತ್ತಿದ್ದಾಗ ಪಕ್ಕದ ಮನೆಯವರಿಗೆ ತಿಳಿದು ಘಟನೆ ಬೆಳಕಿಗೆ ಬಂದಿದೆ.
ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದರೂ ಲೇಡೀಸ್ ಟೈಲರ್ ಅಂಗಡಿ ಒಳಗಿದ್ದ ಲೇಡಿಸ್ ವಸ್ತ್ರಗಳು ಸೇರಿ ನಾಲ್ಕು ಲಕ್ಷ ರೂ. ಸೊತ್ತು ಬೆಂಕಿಗಾಯುತಿಯಾಗಿದೆ. ಇದೀಗ ಅಂಗಡಿ ಹಾಗೂ ಲಕ್ಷಾಂತರ ರೂ. ಸೊತ್ತು ಕಳೆದುಕೊಂಡ ಟೈಲರ್ ಅಂಗಡಿ ಮಾಲಕರು ಕಣ್ಣೀರು ಹಾಕಲಾರಂಭಿಸಿದ್ದಾರೆ.