
ಅಂಗಡಿ ಮುಂಭಾಗ ಇರಿಸಿರುವ 48 ಲೀ. ಹಾಲನ್ನು ಎಗರಿಸಿ ಪರಾರಿಯಾದ ಖದೀಮರು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
Sunday, November 14, 2021
ಚಿಕ್ಕಮಗಳೂರು: ಚಿನ್ನಾಭರಣ, ನಗದು, ಬೆಲೆಬಾಳುವ ವಸ್ತುಗಳನ್ನು ಕಳ್ಳರು ಎಗರಿಸೋದನ್ನು ನಾವು ಕೇಳಿರುತ್ತೇವೆ. ಆದರೆ ಮೂಡಿಗೆರೆ ತಾಲೂಕಿನ ಜನ್ನಾಪುರದಲ್ಲಿ ಖದೀಮ ಕಳ್ಳರು ಕಾರಿನಲ್ಲಿ ಬಂದ ಅಂಗಡಿ ಮುಂಭಾಗ ಇರಿಸಿರುವ 48 ಲೀಟರ್ ಹಾಲನ್ನೇ ಎಗರಿಸಿರುವ ಘಟನೆ ನಡೆದಿದೆ.
ಗೋಣಿಬೀಡು ಹೋಬಳಿಯ ಕರುಣಾಕರ ಎಂಬುವರ ಅಂಗಡಿಗೆಂದು ಇರಿಸಲಾಗಿದ್ದ 48 ಲೀಟರ್ ಹಾಲನ್ನು ಖದೀಮ ಕಳ್ಳರು ಎಗರಿಸಿದ್ದಾರೆ. ಇದರ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಬೆಳಗ್ಗೆ 4 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದಿರುವ ಈ ಖದೀಮರು ಅಂಗಡಿ ಎದುರು ಇಟ್ಟಿದ್ದ ಹಾಲಿನ ಟ್ರೇಯಲ್ಲಿ ಕೆಲವನ್ನು ತಮ್ಮ ಕಾರಿನಲ್ಲಿರಿಸಿ ಬೇಲೂರು ಮಾರ್ಗದ ಕಡೆಗೆ ಪರಾರಿಯಾಗಿದ್ದಾರೆ. ಹಾಲು ಕಳವುಗೈದಿರುವ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.