ಮಂಗಳೂರಿನಲ್ಲಿ ಸಿಕ್ಕಿತ್ತು ಅಮಾನ್ಯ ಗೊಂಡ 500 1000 ಮೌಲ್ಯದ ಕೋಟ್ಯಾಂತರ ಕರೆನ್ಸಿ - ಈ ಮೂವರ ಖತರ್ನಾಕ್ ಪ್ಲಾನ್ ಉಲ್ಟಾ- ಏನಾಯಿತು ಗೊತ್ತಾ?
Friday, November 19, 2021
ಮಂಗಳೂರು: ಭಾರಿ ಪ್ರಮಾಣದ ಹಳೆ ನೋಟು ಬದಲಾವಣೆ ಮಾಡಲು ಹೋಗಿ ಮಂಗಳೂರಿನ ಮೂವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಮಂಗಳೂರಿನ ಕಣ್ಣೂರಿನ 52 ವರ್ಷದ ಝುಬೇರ್ ಹಮ್ಮಬ್ಬ, ಪಡಿಲ್ ನ 32 ವರ್ಷದ ದೀಪಕ್, ಬಜ್ಪೆಯ 40ವರ್ಷದ ನಾಸೀರ್ ಎಂಬ ಮೂವರು ಬಂಧಿತ ಆರೋಪಿಗಳು.
ಈ ಮೂವರು ಆರೋಪಿಗಳು 2017ರಲ್ಲಿ ಅಮಾನ್ಯ ಗೊಂಡ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಶಿವಮೊಗ್ಗ ಚಿತ್ರದುರ್ಗದಿಂದ ತಂದು ಮಂಗಳೂರಿನಲ್ಲಿ ಕೆಲ ವ್ಯಕ್ತಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ. ಅಮಾನ್ಯ ಗೊಂಡ 500 ಮತ್ತು 1000 ನೋಟಿಗೆ ಯಾವುದೇ ಮೌಲ್ಯವಿಲ್ಲ ದಿದ್ದರೂ ಇದನ್ನು ಬ್ಯಾಂಕಿಗೆ ನೀಡಿದರೆ 50 ಶೇಕಡ ಹಣವನ್ನು ನೀಡುತ್ತಾರೆ ಎಂದು ಕೆಲವರಿಗೆ ತಿಳಿಸಿದ್ದಾರೆ.
ಈ ಹಣದ 20 ಶೇಕಡ ಹಣವನ್ನು ನಮಗೆ ನೀಡಿದರೆ ಹಣವನ್ನು ಕೊಡುತ್ತೇವೆ ಎಂದು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ಕಾರು ಸಮೇತ ಮೂವರನ್ನು ಬಂಧಿಸಿ 1.92 ಕೋಟಿ ಮೌಲ್ಯದ ಅಮಾನ್ಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಕ್ಕಿದ್ದು 1.92 ಕೋಟಿ- ದಂಡ ಕಟ್ಟಬೇಕಾದದ್ದು 9.5 ಕೋಟಿ
ಅಮಾನ್ಯ ಗುಂಡ ಹಳೆ ನೋಟುಗಳನ್ನು ಶೇಖರಿಸುವುದು ಸಾಗಾಟ ಮಾಡುವುದು ಅಪರಾಧವಾಗಿದ್ದು ಇದಕ್ಕೆ ಕಾನೂನು ಪ್ರಕಾರ ರೂ 10000 ಅಥವಾ ವಶಪಡಿಸಿಕೊಂಡ ಅಮಾನ್ಯ ನೋಟುಗಳ ಮೌಲ್ಯದ ಐದು ಪಟ್ಟು ದಂಡ ಕಟ್ಟಬೇಕಾಗುತ್ತದೆ. ಇಲ್ಲಿ ಮೂವರು ಆರೋಪಿಗಳಿಂದ ಸಿಕ್ಕಿರುವ 1.92 ಕೋಟಿ ಅಮಾನ್ಯ ನೋಟಗಳಿಗೆ ಆರೋಪಿಗಳು ಸುಮಾರು 9.5 ಕೋಟಿ ಹಣವನ್ನು ದಂಡವಾಗಿ ಕಟ್ಟಬೇಕಾಗಿದೆ.