-->
Alvas Agamana 2021-22: ಆಳ್ವಾಸ್ ಆಗಮನ 2021-22: ಸಬ್ಕಾ ಸುನನಾ, ದಿಲ್‍ಕಾ ಕರನ್ ತತ್ವ ಅನುಸರಿಸಿ: ಡಾ ಪಿ ವಿ. ಭಂಡಾರಿ

Alvas Agamana 2021-22: ಆಳ್ವಾಸ್ ಆಗಮನ 2021-22: ಸಬ್ಕಾ ಸುನನಾ, ದಿಲ್‍ಕಾ ಕರನ್ ತತ್ವ ಅನುಸರಿಸಿ: ಡಾ ಪಿ ವಿ. ಭಂಡಾರಿ

ಆಳ್ವಾಸ್ ಆಗಮನ 2021-22: ಸಬ್ಕಾ ಸುನನಾ, ದಿಲ್‍ಕಾ ಕರನ್ ತತ್ವ ಅನುಸರಿಸಿ: ಡಾ ಪಿ ವಿ. ಭಂಡಾರಿ





ಆಳ್ವಾಸ್ ಎಂಜಿನಿಯರಿಂಗ್ ಕಾಲೇಜ್‌ ವತಿಯಿಂದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಳ್ವಾಸ್ ಆಗಮನ 2021-22ರ ಸರಣಿ ಕಾರ್ಯಕ್ರಮ ನಡೆಯುತ್ತಿದೆ. ಇದರ ಭಾಗವಾಗಿ, 5ನೇ ದಿನ ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಯ ನಿರ್ದೇಶಕ ಹಾಗೂ ಮನೋವೈದ್ಯ ಡಾ. ಪಿ. ವಿ. ಭಂಡಾರಿ ಉಪನ್ಯಾಸ ನೀಡಿದರು.



ನಿಮ್ಮ ಬದುಕಿನಲ್ಲಿ ಉತ್ತಮ ಅಂಶಗಳನ್ನು ರೂಢಿಸಿಕೊಳ್ಳಲು ಬಾಹ್ಯ ಹಾಗೂ ಆಂತರಿಕವಾಗಿ ಅಚಲ ಪ್ರಯತ್ನ ನಡೆಸಬೇಕಿದೆ. ಯಾವುದೇ ವ್ಯಕ್ತಿ ತನ್ನ ಸ್ನೇಹಿತರ ಬಳಗದಿಂದ ಜೀವನದಲ್ಲಿ ಉನ್ನತಿ ಸಾಧಿಸಬಹುದು ಹಾಗೂ ಅವನತಿಯನ್ನೂ ಹೊಂದಬಹುದು ಹಾಗಾಗಿ ನಮ್ಮ ಸಮೃದ್ಧಿಗಾಗಿ "ಸಬ್ಕಾ ಸುನನಾ, ದಿಲ್‍ಕಾ ಕರನಾ" ತತ್ವವನ್ನು ಅನುಸರಿಸಿದರೆ ಜೀವನ ಸುಖಕರವಾಗಲು ಸಾಧ್ಯ ಎಂದರು.



ಖಿನ್ನತೆ, ಪರೀಕ್ಷಾ ಭಯ, ಖಿನ್ನತೆ, ಹೊಂದಾಣಿಕೆಯ ಸಮಸ್ಯೆ, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಮಾನಸಿಕ ಒತ್ತಡಗಳು, ಈ ವಿಷಯದ ಅಗತ್ಯತೆ, ಅದನ್ನು ನಿರ್ವಹಿಸುವ ವಿಧಾನ, ಸವಾಲಿನ ಪರಿಹಾರಗಳು ಮೊದಲಾದ ವಿಷಯಗಳ ಬಗ್ಗೆ ಅವರು ಉಪಯುಕ್ತ ಮಾಹಿತಿ ಹಂಚಿಕೊಂಡರು.



ಮಾದಕ ವಸ್ತುಗಳ ದಾಸರಾಗುವುದು ಚಕ್ರವ್ಯೂಹದಲ್ಲಿ ಸಿಲುಕಿಕೊಂಡಂತೆ. ಒಮ್ಮೆ ಆ ಪಾಶದಲ್ಲಿ ಸಿಲುಕಿದರೆ, ಮತ್ತೆ ಹಿಂತಿರುಗಿ ಬರಲು ಅಸಾಧ್ಯ. ಆದ್ದರಿಂದ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ನೆಮ್ಮದಿ ಹಾಗೂ ಸುಂದರ ಜೀವನ ನಡೆಸಲು ಸಾಧ್ಯ ಎಂದು ಯುವಜನತೆ ಅರಿಯಬೇಕು ಎಂದರು.



ನಂತರ ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್, ಸ್ಚಚ್ಛ ಮನಸ್ಸ ಕಾರ್ಯಕ್ರಮದ ಸಂಯೋಜಕ ರಂಜನ್ ಬೆಲ್ಲರ್ಪಾಡಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.


ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ , ಎಐಇಟಿ ಪ್ರಾಚಾರ್ಯ ಡಾ ಪೀಟರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮೋನಿಕಾ ಕಾರ್ಯಕ್ರಮ ನಿರೂಪಿಸಿರು. 

Ads on article

Advertise in articles 1

advertising articles 2

Advertise under the article