ಎಚ್ಚರ- Any Desk App ಮೊಬೈಲ್ ನಲ್ಲಿ ಹಾಕಿಸಿ ಮಂಗಳೂರಿನ ವ್ಯಕ್ತಿಗೆ 1 ಲಕ್ಷ ರೂ ವಂಚನೆ
Tuesday, November 30, 2021
ಮಂಗಳೂರು; ಮಂಗಳೂರಿನ ವ್ಯಕ್ತಿಯೊಬ್ಬರು ಅಪರಿಚಿತ ವ್ಯಕ್ತಿಯ ಮಾತು ನಂಬಿ ತಮ್ಮ ಮೊಬೈಲ್ ಗೆ any Desk app ಇನ್ಸ್ಟಾಲ್ ಮಾಡಿಸಿಕೊಂಡು ರೂ 99,900 ಕಳೆದುಕೊಂಡಿದ್ದಾರೆ.
ಈ ವ್ಯಕ್ತಿಗೆ ಜೂನ್ 1 ರಂದು ಬೆಳಿಗ್ಗೆ 10 ಗಂಟೆಗೆ 7908256272 ನೇ ನಂಬ್ರದಿಂದ ಕರೆ ಬಂದಿದ್ದು ಪೋನಿನಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ತಾನು ಬಿ.ಎಸ್.ಎನ್.ಎಲ್ ಕಛೇರಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿ ಮೊಬೈಲ್ ರೀಚಾರ್ಜ್ ಅಪ್ ಡೇಟ್ ಮಾಡುವರೇ Any desk App ನ್ನು ಡೌನ್ ಲೋಡ್ ಮಾಡಲು ತಿಳಿಸಿದ್ದನು.
ಅದರಂತೆ ಈ ವ್ಯಿ Any desk App ನ್ನು ಡೌನ್ ಲೋಡ್ ಮಾಡಿದಾಗ ವೆಬ್ ಪೇಜೊಂದು ಓಪನ್ ಆಗಿದ್ದು ಕರೆ ಮಾಡಿದ ವ್ಯಕ್ತಿಯು ಅದರಲ್ಲಿ ಮೊಬೈಲ್ ರೀಚಾರ್ಜ್ ಮಾಡಲು ಬ್ಯಾಂಕ್ ಕಾರ್ಡ್ ನ CVV ನಂಬ್ರವನ್ನು ಹಾಕಲು ತಿಳಿಸದ್ದು ಅದರಂತೆ ಇವರು CVV ನಂಬ್ರವನ್ನು ಹಾಕಿದ್ದಾರೆ. ಇದಾದ ಕೂಡಲೇ ಇವರ ಬ್ಯಾಂಕ್ ಖಾತೆಯಿಂದ ರೂ.99,900/- ವರ್ಗಾವಣೆಗೊಂಡಿರುತ್ತದೆ.
ಈ ರೀತಿಯಾಗಿ ಬಿ.ಎಸ್.ಎನ್.ಎಲ್ ಕಛೇರಿಯಿಂದ ಕರೆ ಮಾಡುವುದಾಗಿ ತಿಳಿಸಿ ಈ ವ್ಯಕ್ತಿ ಗೆ ಮೊಬೈಲ್ ರೀಚಾರ್ಜ್ ಮಾಡುವಂತೆ ತಿಳಿಸಿ ಬ್ಯಾಂಕ್ ಖಾತೆ ಸಂಖ್ಯೆ ಯಿಂದ ತನ್ನ ಖಾತೆಗೆ ರೂ.99,900/- ವನ್ನು ವರ್ಗಾಯಿಸಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಇದೀಗ ಪ್ರಕರಣ ದಾಖಲಿಸಿದ್ದಾರೆ.