Apex Alvas agreement- ಅಪೆಕ್ಸ್ ಮತ್ತು ಆಳ್ವಾಸ್ ತಾಂತ್ರಿಕ ಮಹಾ ವಿದ್ಯಾಲಯ ಮಧ್ಯೆ ತಾಂತ್ರಿಕ ಒಪ್ಪಂದ
ಅಪೆಕ್ಸ್ ಮತ್ತು ಆಳ್ವಾಸ್ ತಾಂತ್ರಿಕ ಮಹಾ ವಿದ್ಯಾಲಯ ಮಧ್ಯೆ ತಾಂತ್ರಿಕ ಒಪ್ಪಂದ
ಅಕಾಡೆಮಿ ಇನ್ ಪರ್ಸ್ಯೂಟ್ ಆಫ್ ಎಂಜಿನಿಯರಿಂಗ್ ಎಕ್ಸಲೆನ್ಸ್(ಅಪೆಕ್ಸ್) ಮತ್ತು ಆಳ್ವಾಸ್ ತಾಂತ್ರಿಕ ಮಹಾವಿದ್ಯಾನಿಲಯದ ಜೊತೆ ತಾಂತ್ರಿಕ ಒಪ್ಪಂದ ಯಶಸ್ವಿಯಾಗಿದೆ.
ಉದಯೋನ್ಮುಖ ಎಂಜಿನಿಯರ್‌ಗಳ ಗೇಟ್ ಪರೀಕ್ಷೆಯ ಮಹತ್ವವನ್ನು ಗಮನದಲ್ಲಿ ಇಟ್ಟುಕೊಂಡು ಆಳ್ವಾಸ್ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಒಪ್ಪಂದದಿಂದಾಗಿ ಐಐಟಿ, ಐಐಎಸ್‌ಸಿಯಂತಹ ಪ್ರತಿಷ್ಠಿತ ಸಂಸ್ಥೆಗಳಿಂದ ಎಂಟೆಕ್, ಪಿಎಚ್‌ಡಿ ಪದವಿ ಪಡೆದ ನುರಿತ ಪರಿಣಿತರನ್ನು ಒಳಗೊಂಡ ಅಪೆಕ್ಸ್ ಸಂಸ್ಥೆಯ ಮೂಲಕ ಗೇಟ್ ತರಬೇತಿಯನ್ನು ಆರಂಭಿಸಿದೆ.
ಮೂಡಬಿದಿರೆಯ ಆಳ್ವಾಸ್ ಸಂಸ್ಥೆಯ ಈ ಉತ್ತಮ ಗುಣಮಟ್ಟದ ತರಬೇತಿ ಕೇಂದ್ರ ಇದೇ ನವೆಂಬರ್ 28ರಿಂದ ತರಗತಿಗಳನ್ನು ಆರಂಭಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹೈದರಾಬಾದ್ ಅಥವಾ ದೆಹಲಿ ವರೆಗೆ ತೆರಳುವ ಅಗತ್ಯ ಇನ್ನು ಇರುವುದಿಲ್ಲ.
ದೇಶದ ಯಾವುದೇ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಹಾಗೂ ಸಿವಿಲ್ ವಿಭಾಗದ ವಿದ್ಯಾರ್ಥಿಗಳು ಮತ್ತು ಗೇಟ್ ಪರೀಕ್ಷೆಯ ಆಕಾಂಕ್ಷಿಗಳು ಈ ತರಬೇತಿಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹೊರ ಪ್ರದೇಶದ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವನ್ನೂ ಒದಗಿಸಲಾಗುವುದು.
ಪ್ರತಿಷ್ಠಿತ ಸಂಸ್ಥೆಗಳಾದ ಐಐಟಿ ಮತ್ತು ಐಐಎಸ್‌ಸಿಗಳಲ್ಲಿ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿಗಳಿಗೆ ಅಗತ್ಯ. ಇದು ಸಾಧ್ಯವಾದರೆ ಸರ್ಕಾರಿ ಸ್ವಾಮ್ಯದ ಅಥವಾ ಖಾಸಗಿ ವಲಯದ ದಿಗ್ಗಜ ಕಂಪೆನಿಗಳಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿದೆ.
ಈ ಒಪ್ಪಂದದಿಂಧಾಗಿ ಕ್ಯಾಂಪಸ್ ನೇಮಕಾತಿಗಳೂ ನಡೆಯಲಿದೆ. ಹಾಗೂ ಗೇಟ್ ಪರೀಕ್ಷೆಯ ತಯಾರಿ ಬಹಳಷ್ಟು ಪ್ರಯೋಜನವಾಗಲಿದೆ.
ಈ ಕುರಿತ ಹೆಚ್ಚಿನ ಮಾಹಿತಿಯನ್ನು https://apexacademics.co.in ಅಂತರ್ಜಾಲಕ್ಕೆ ಭೇಟಿ ನೀಡಬಹುದು.