ಕಚೇರಿಯ ಯುವತಿಯರೊಂದಿಗೆ ವೈದ್ಯಾಧಿಕಾರಿ ರಾಸಲೀಲೆ ಪ್ರಕರಣ- ಜಾಮೀನು ವಿಚಾರ ಏನಾಯಿತು ಅಂದರೆ...
Monday, November 29, 2021
ಮಂಗಳೂರು: ಕಚೇರಿಯ ಹಲವು ಯುವತಿಯರೊಂದಿಗೆ ರಾಸಲೀಲೆಯಲ್ಲಿ ತೊಡಗಿ ಪೊಲೀಸರಿಂದ ಬಂಧನಕ್ಕೊಳಗಾದ ವೈದ್ಯಾಧಿಕಾರಿ ಡಾ ರತ್ನಾಕರ್ ಗೆ ಜಾಮೀನು ದೊರೆತಿದೆ.
ಇಂದು ಮೂರನೇ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಡಾ ರತ್ನಾಕರ್ ಜಾಮೀನು ಅರ್ಜಿ ವಿಚಾರಣೆಗೆ ಬಂದು ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಡಾ ರತ್ನಾಕರ್ ಕುಷ್ಠರೋಗ ನಿವಾರಣಾಧಿಕಾರಿ ಮತ್ತು ಆಯುಷ್ಮಾನ್ ವಿಭಾಗದ ನೋಡಲ್ ಅಧಿಕಾರಿಯಾಗಿದ್ದು ಕಚೇರಿಯ ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದರು. ಇವರ ವರ್ತನೆ ಬಗ್ಗೆ ಇಲಾಖೆ ಗಮನಕ್ಕೆ ಬಂದು ನವೆಂಬರ್ 8 ರಂದು ಅಮಾನತು ಮಾಡಲಾಗಿತ್ತು. ಎರಡು ದಿನಗಳ ಹಿಂದೆ ರತ್ನಾಕರ್ ಅವರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವ ವಿಡಿಯೋ ಮತ್ತು ಪೊಟೋ ವೈರಲ್ ಆಗಿ ಪ್ರಕರಣ ಬೆಳಕಿಗೆ ಬಂದಿತ್ತು. ಆ ಬಳಿಕ ದೂರು ಸ್ವೀಕರಿಸಿದ ಪೊಲೀಸರು ಡಾ. ರತ್ನಾಕರ್ ನನ್ನು ಬಂಧಿಸಿದ್ದರು. ಇದೀಗ ನ್ಯಾಯಾಲಯ ಡಾ ರತ್ನಾಕರ್ ಗೆ ಜಾಮೀನು ಮಂಜೂರು ಮಾಡಿದೆ.