ಬೆಳ್ತಂಗಡಿ: ಸ್ನಾನ ಮಾಡಲು ಹೋದ ಯುವಕ ನದಿಪಾಲು
Sunday, November 28, 2021
ಬೆಳ್ತಂಗಡಿ: ಗೆಳೆಯರೊಂದಿಗೆ ಸ್ನಾನ ಮಾಡಲು ಹೋಗಿದ್ದ ಯುವಕನೋರ್ವನು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.
ಲಾಯಿಲ ಗ್ರಾಮದ ಕಾಶಿಬೆಟ್ಟು ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ನಬಾನ್(22) ಮೃತ ಯುವಕ.
ನಬಾನ್ ನಡ ಗ್ರಾಮದ ಕುತ್ರೊಟ್ಟು ನದಿಯಲ್ಲಿ ಮೂವರು ಗೆಳೆಯರೊಂದಿಗೆ ಸ್ನಾನ ಮಾಡಲು ಹೋಗಿದ್ದ. ಈ ಸಂದರ್ಭ ನದಿಯಲ್ಲಿ ನಬಾನ್ ನದಿಯಲ್ಲಿ ಮುಳುಗಲು ತೊಡಗಿದ್ದಾನೆ.
ಮುಳುಗಿದ್ದ ನಬಾನ್ ನ್ನು ಸ್ಥಳೀಯರ ಸಹಾಯದಿಂದ ಮೇಲೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.