![Gangwar in Mangaluru- ಮಂಗಳೂರಿನಲ್ಲಿ ಗ್ಯಾಂಗ್‌ವಾರ್: ಹಳೆ ದ್ವೇಷ, ಹತ್ಯೆಗೆ ರಿವೇಂಜ್ Gangwar in Mangaluru- ಮಂಗಳೂರಿನಲ್ಲಿ ಗ್ಯಾಂಗ್‌ವಾರ್: ಹಳೆ ದ್ವೇಷ, ಹತ್ಯೆಗೆ ರಿವೇಂಜ್](https://blogger.googleusercontent.com/img/b/R29vZ2xl/AVvXsEhyEDDq_cIiu5oyEIWEoDWAlQiml-qa0Q8AcXDgj-P_qvHcULU7iZa5uqkOecZELlxhntYFligkB416bSR66yKWIqLFUT-qyVrcE5GcTel6TSPYoyQr6MP1Ep1H0dyYe2C1wC5rDfpRpBw/w640-h557/IMG-20211129-WA0028.jpg)
Gangwar in Mangaluru- ಮಂಗಳೂರಿನಲ್ಲಿ ಗ್ಯಾಂಗ್‌ವಾರ್: ಹಳೆ ದ್ವೇಷ, ಹತ್ಯೆಗೆ ರಿವೇಂಜ್
ಮಂಗಳೂರಿನಲ್ಲಿ ಗ್ಯಾಂಗ್‌ವಾರ್: ಹಳೆ ದ್ವೇಷ, ಹತ್ಯೆಗೆ ರಿವೇಂಜ್
ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ರೌಡಿ ತಂಡಗಳ ನಡುವೆ ಗ್ಯಾಂಗ್‌ವಾರ್ ನಡೆದಿದೆ.
ಶ್ರವಣ್ ಎಂಬ ಯುವಕ ಮೇಲೆ ಎಂಟು ಮಂದಿಯ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು.
ಇದರಿಂದ ಶ್ರವಣ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ.
ಎರಡು ತಂಡಗಳ ನಡುವಿನ ವೈಷಮ್ಯ ಮತ್ತು 2020ರಲ್ಲಿ ಬರ್ಕೆಯಲ್ಲಿ ನಡೆದ ಇಂದ್ರಜಿತ್ ಹತ್ಯೆ ಪ್ರಕರಣಕ್ಕೆ ಸೇಡು ತೀರಿಸಿಕೊಳ್ಳುವ ಪ್ರಯತ್ನವೇ ಗ್ಯಾಂಗ್‌ವಾರ್‌ಗೆ ಕಾರಣವಾಗಿದೆ.
ಅಳಕೆ ಗ್ಯಾಂಗ್ ಎಂಟು ಮಂದಿ ರೌಡಿಗಳು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದ ಗಾಯಗೊಂಡಿರುವಾತ ಅಂಕಿತ್ ಎಂಬಾತನ ಸ್ನೇಹಿತ. ಅಂಕಿತ್ ಇಂದ್ರಜಿತ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಒಬ್ಬಾತನ ಸಹೋದರನಾಗಿದ್ದಾನೆ.
2020ರಲ್ಲಿ ನಡೆದಿದ್ದ ಇಂದ್ರಜಿತ್ ಕೊಲೆ ಕೃತ್ಯವನ್ನು ತಲವಾರ್ ಜಗ್ಗ ನೇತೃತ್ವದ ಬೋಳೂರು ಗ್ಯಾಂಗ್ ನಡೆಸಿತ್ತು.
ಈ ಘಟನೆಯ ಹಿಂದೆ ಯಾವುದೇ ಕೋಮು ದ್ವೇಷ ಇರುವುದಿಲ್ಲ. ಬಹುತೇಕ ಎಲ್ಲರೂ ಒಂದೇ ಕೋಮಿನವರು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.