JDS loosing identity?- ಜೆಡಿಎಸ್‌ಗೆ ಮರ್ಮಾಘಾತ: ಅಸ್ತಿತ್ವಕ್ಕೆ ಕಳಕೊಳ್ಳುವ ಭೀತಿಯಲ್ಲಿ!?
ಜೆಡಿಎಸ್‌ಗೆ ಮರ್ಮಾಘಾತ: ಅಸ್ತಿತ್ವಕ್ಕೆ ಕಳಕೊಳ್ಳುವ ಭೀತಿಯಲ್ಲಿ!?
ಎರಡು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿ ಇದೆ.
ಎರಡು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಸ್ಪರ್ಧೆ ಒಡ್ಡುವ ಲಕ್ಷಣವನ್ನೇ ತೋರಿಸದೆ, ಮುಂದಿನ ಚುನಾವಣೆಯಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ.
ಎರಡು ಕ್ಷೇತ್ರಗಳ ಪೈಕಿ ಸಿಂದಗಿ ಕ್ಷೇತ್ರವನ್ನು ಜೆಡಿಎಸ್ ಪ್ರತಿನಿಧಿಸಿತ್ತು. 2018ರಲ್ಲಿ ಜೆಡಿಎಸ್ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಪಕ್ಷದ ವಿಜೇತ ಅಭ್ಯರ್ಥಿ 2018ರಲ್ಲಿ 70865 ಮತಗಳನ್ನು ಪಡೆದಿದ್ದ ಜೆಡಿಎಸ್ ಈ ಬಾರಿ ಕೇವಲ 4353 ಮತಗಳನ್ನಷ್ಟೇ ಪಡೆಯಲು ಶಕ್ತವಾಗಿದೆ.
ಆದರೆ, 2021ರ ಚುನಾವಣೆಯಲ್ಲಿ ಸರ್ಕಾರದ ವಿರೋಧಿ ಮತಗಳನ್ನು ಕ್ರೋಢೀಕರಿಸುವಲ್ಲಿ ದಯನೀಯ ವೈಫಲ್ಯ ಅನುಭವಿಸಿದೆ.
ತಾನು ಈ ಹಿಂದೆ ಪ್ರತಿನಿಧಿಸಿದ್ದ ಸಿಂಧಗಿ ಕ್ಷೇತ್ರದಲ್ಲಿ ಕೇವಲ 4353 ಮತಗಳನ್ನಷ್ಟೇ ಪಡೆದುಕೊಂಡು ಮುಖ ಮುಚ್ಚಿಕೊಳ್ಳುವ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ನಡೆದ ಇನ್ನೊಂದು ಕ್ಷೇತ್ರದ ಚುನಾವಣೆಯಲ್ಲಿ, ಜೆಡಿಎಸ್ ಜೊತೆ ಬಿಜೆಪಿ ಕೂಡ ಸೋಲು ಅನುಭವಿಸಿದೆ. ಇಲ್ಲಿ ಜೆಡಿಎಸ್ ಪಡೆದ ಮತಗಳು ಕೇವಲ 927 ಮಾತ್ರ.