ಮೂಡುಬಿದಿರೆ: ನಾಪತ್ತೆಯಾಗಿದ್ದ ವಿವಾಹಿತೆಯು ಸಂಘಟನೆಯೊಂದರ ಮುಖಂಡನೊಂದಿಗೆ ಪತ್ತೆ: ಈಕೆ ಅದೇ ಸಂಘಟನೆಯ ಕಾರ್ಯಕರ್ತನ ಪತ್ನಿ!
Thursday, November 4, 2021
ಮೂಡುಬಿದಿರೆ: ಸಂಘಟನೆಯೊಂದರಲ್ಲಿ ಗುರುತಿಸಿಕೊಂಡ ಯುವಕನೋರ್ವನು ಅದೇ ಸಂಘಟನೆಯ ಕಾರ್ಯಕರ್ತನೋರ್ವನ ಪತ್ನಿಯನ್ನೇ ಅಪಹರಿಸಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದ ಕಾರ್ಕಳದ ಸಂದೀಪ್ ಆಚಾರ್ಯ ಎಂಬ ಯುವಕ ಅದೇ ಸಂಘಟನೆಯ ಮೂಡುಬಿದಿರೆ ತಾಲೂಕಿನ ಕಾರ್ಯಕರ್ತನೋರ್ವನ ಪತ್ನಿಯನ್ನೇ ಅಪಹರಣ ಮಾಡಿದ್ದಾಗಿ ದೂರು ದಾಖಲಾಗಿದೆ.
ಶಿರ್ಲಾಲು ಹೈಸ್ಕೂಲ್ ಬಳಿ ಹಾಡಿಯಂಗಡಿ ಎಂಬಲ್ಲಿನ ನಿವಾಸಿ ಸಂದೀಪ್ ಆಚಾರ್ಯನು, ಕಾರ್ಯಕರ್ತರೆನ್ನಲಾದ ಹರೀಶ್ ಎಂಬವರ ಪತ್ನಿಯನ್ನು ಅಪಹರಿಸಿರುವುದಾಗಿ ಆಕೆಯ ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಯುವತಿ ವಾರದ ಹಿಂದೆ ಎರಡು ವರ್ಷದ ಮಗುವಿನೊಂದಿಗೆ ತವರು ಮನೆಗೆ ತೆರಳಿದ್ದಳು. ಈ ವೇಳೆ ಸಂದೀಪ್ ಆಚಾರ್ಯ ಆಕೆಯನ್ನು ಅಪಹರಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಮೂಡುಬಿದಿರೆ ಪೊಲೀಸರು ಅಪಹರಣಕ್ಕೊಳಗಾದ ಯುವತಿ ಹಾಗೂ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ಇದೀಗ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪತಿಯ ಮನೆಗೆ ಹೋಗಲೊಪ್ಪದ ಮಹಿಳೆಯನ್ನು ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ ಗೆ ಸೇರಿಸಲಾಗಿದೆ.