
ಪ್ರೀತಿಸಿದ ಹುಡುಗಿಗೆ ಹೀಗಾ ಮಾಡೋದು? ಲಾಡ್ಜ್ ನಲ್ಲಿ ಕೂಡಿ ಹಾಕಿ...
Friday, November 12, 2021
ಉತ್ತರ ಕನ್ನಡ : ಪತಿಯಿಂದ ದೂರವಾಗಿದ್ದ ಮಹಿಳೆಯನ್ನು ಪ್ರೀತಿಸುತ್ತಿದ್ದ ಯುವಕನೆ ಆಕೆಯ ಚಿನ್ನಾಭರಣ ಕದ್ದೊಯ್ದ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಪತಿಯಿಂದ ದೂರವಾಗಿದ್ದ ಮಹಿಳೆಯನ್ನು ಈತ ಪ್ರವಾಸಕ್ಕೆ ಕರೆತಂದಿದ್ದ . ಆಕೆಯನ್ನು ಲಾಡ್ಜ್ ನ ರೂಮಿನಲ್ಲಿ ಕೂಡಿ ಹಾಕಿ ಚಿನ್ನಾಭರಣ , ಮೊಬೈಲ್ ಮತ್ತು ಬ್ಯಾಗ್ ಜೊತೆಗೆ ಪರಾರಿಯಾಗಿದ್ದಾನೆ .
ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಮಹಿಳೆ ಮತ್ತು ಪುಣೆ ಮೂಲದ ವ್ಯಕ್ತಿ ನಡುವಿನ ಪರಿಚಯ ಪ್ರೇಮಕ್ಕೆ ತಿರುಗಿದ ಬಳಿಕ ನಡೆದ ಘಟನೆಯಿದು . ಆಕೆಯನ್ನು ಮದುವೆ ಆಗುವುದಾಗಿ ಸಹ ಆತ ನಂಬಿಸಿದ್ದನು .
ಬುಧವಾರ ಇವರು ಪ್ರವಾಸಕ್ಕೆ ಬಂದಿದ್ದು ಗೋಕರ್ಣದ ರಥಬೀದಿಯ ಲಾಡ್ಜ್ ನಲ್ಲಿ ಕೊಠಡಿ ಬಾಡಿಗೆ ಪಡೆದು ವಾಸವಿದ್ದರು . ರಾತ್ರಿ ಮದ್ಯಪಾನ ನಶೆಯಲ್ಲಿ ಮಹಿಳೆ ಮಲಗಿದ ವೇಳೆ ಆಕೆಯ ಹತ್ತಿರವಿದ್ದ 1.52 ಲಕ್ಷ ರೂ . ಮೌಲ್ಯದ 35 ಗ್ರಾಂ ತೂಕದ ಮಂಗಳಸೂತ್ರ , ಎರಡು ಕಿವಿ ಓಲೆ , 15 ಸಾವಿರ ರೂಪಾಯಿ ನಗದು , ಮೊಬೈಲ್ ಫೋನ್ ಇದ್ದ ಬ್ಯಾಗ್ ಅನ್ನು ಕದ್ದೋಯ್ದಿದ್ದಾನೆ. ಕೊಠಡಿ ಬೀಗ ಹಾಕಿ ಈತ ಪರಾರಿಯಾಗಿದ್ದಾನೆ.