-->
ಮಾಲ್ಡೀವ್ಸ್ ನಲ್ಲಿ‌ ಬಿಕಿನಿಯಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ ರಾಧೇಶ್ಯಾಮ್ ಬೆಡಗಿ ಪೂಜಾ ಹೆಗ್ಡೆ

ಮಾಲ್ಡೀವ್ಸ್ ನಲ್ಲಿ‌ ಬಿಕಿನಿಯಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ ರಾಧೇಶ್ಯಾಮ್ ಬೆಡಗಿ ಪೂಜಾ ಹೆಗ್ಡೆ

ಹೈದರಾಬಾದ್​: ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಬಹಳ ಬಿಜಿಯಾಗಿರುವ ಹಾಟ್​ ಚೆಲುವೆ ಪೂಜಾ ಹೆಗ್ಡೆ ಸಿನಿಮಾದಿಂದ ಕೊಂಚ ಬಿಡುವು ಪಡೆದುಕೊಂಡಿದ್ದಾರೆ. ಇದೀಗ ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್​ನಲ್ಲಿ ಕಣ್ಣುಕುಕ್ಕುವಂತೆ ಧಿರಿಸು ಧರಿಸಿ ಕಡಲ ಕಿನಾರೆಯಲ್ಲಿ ಮಿಂದೇಳುತ್ತಿದ್ದಾರೆ. 


ಮಾಲ್ಡೀವ್ಸ್​ ನಲ್ಲಿ ತಮ್ಮ ಪ್ರವಾಸದ ಪ್ರತಿಯೊಂದು ಫೋಟೋ ಮತ್ತು ವೀಡಿಯೋಗಳನ್ನು ತಮ್ಮ ಟ್ವೀಟರ್  ಖಾತೆಯಲ್ಲಿ ನಟಿ ಪೂಜಾ ಹೆಗ್ಡೆ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಪೂಜಾ ಹೆಗ್ಡೆ ಬಿಕಿನಿ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದೆ. ಸ್ವಿಮ್ಮಿಂಗ್​ ಫೂಲ್ ಒಳಗಡೆ ಕುಳಿತು ಅವರು ಬ್ರೇಕ್​ಫಾಸ್ಟ್​ ಮಾಡುತ್ತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಲ್ಲದೆ, ಬಿಕಿನಿಯಲ್ಲಿ ಡ್ಯಾನ್ಸ್​ ಮಾಡಿರುವ ವಿಡಿಯೋವಂತೂ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಧೂಳೆಬ್ಬಿಸಿದೆ. 

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಇಳಯ ದಳಪತಿ ವಿಜಯ್​ ಅಭಿನಯದ ಬೀಸ್ಟ್​ ಚಿತ್ರದಲ್ಲಿ ಒಂದು ಹಂತದ ಚಿತ್ರೀಕರಣ ಮುಗಿಸಿದ ಬೆನ್ನಲ್ಲೇ ಪೂಜಾ ಮಾಲ್ಡೀವ್ಸ್​ಗೆ ಹಾರಿದ್ದಾರೆ. ಮಹೇಶ್​ ಬಾಬು ಅಭಿನಯದ ಹೊಸ ಚಿತ್ರದಲ್ಲಿ ಪೂಜಾ ಕಾಣಿಸಿಕೊಳ್ಳಲಿದ್ದಾರೆ. ಆಚಾರ್ಯ ಮತ್ತು ರಾಧೆಶ್ಯಾಮ್​ ಚಿತ್ರ ಪೂರ್ಣಗೊಂಡಿದ್ದು ಬಿಡುಗಡೆಗೆ ಸಿದ್ಧವಾಗಿವೆ. 2022 ಫೆಬ್ರವರಿ 4ಕ್ಕೆ ಆಚಾರ್ಯ ಮತ್ತು 2022 ಜನವರಿ 14ಕ್ಕೆ ರಾಧೆಶ್ಯಾಮ್​ ಬಿಡುಗಡೆಯಾಗಲಿದೆ.

Ads on article

Advertise in articles 1

advertising articles 2

Advertise under the article