-->
Mangaluru: ಈತ ಪೋಲಿಸರಿಗೆ ಬೇಕಾಗಿದ್ದು 2 ಲೀಟರ್ ಶ್ರೀಗಂಧ ಎಣ್ಣೆ ಪ್ರಕರಣದಲ್ಲಿ- 16 ವರ್ಷದ ಬಳಿಕ....

Mangaluru: ಈತ ಪೋಲಿಸರಿಗೆ ಬೇಕಾಗಿದ್ದು 2 ಲೀಟರ್ ಶ್ರೀಗಂಧ ಎಣ್ಣೆ ಪ್ರಕರಣದಲ್ಲಿ- 16 ವರ್ಷದ ಬಳಿಕ....

ಮಂಗಳೂರು: ಶ್ರೀಗಂಧದ ಎಣ್ಣೆ ಸಾಗಾಟ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನು ಪಡೆದು ಬಿಡುಗಡೆ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ‌.

ಕಾಸರಗೋಡು ಜಿಲ್ಲೆಯ ಕೊಲ್ಲಂಬಾಡಿ ನಿವಾಸಿ ಮಹಮ್ಮದ್ ರಫೀಕ್ ಎಂ.ಎಂ. ಬಂಧಿತ ಆರೋಪಿ.

ಮಹಮ್ಮದ್ ರಫೀಕ್ ಎಂ.ಎಂ.‌16 ವರ್ಷಗಳ ಕೆಳಗೆ ನಗರದ ಪುತ್ತೂರಿನಿಂದ ಕೇರಳ ರಾಜ್ಯಕ್ಕೆ ಅಕ್ರಮವಾಗಿ 2ಲೀ. ಶ್ರೀಗಂಧದ ಎಣ್ಣೆ ಸಾಗಾಟ ಮಾಡಿದ್ದ ಆರೋಪದಲ್ಲಿ ಬಂಧಿತನಾಗಿ ಬಿಡುಗಡೆಯಾಗಿದ್ದ. ಆದರೆ ಆ ಬಳಿಕ ಜಾಮೀನು ಪಡೆದ ಬಳಿಕ ತಲೆ ಮರೆಸಿಕೊಂಡಿದ್ದ. ಈತನ ಪತ್ತೆಗೆ ನ್ಯಾಯಾಲಯ ದಸ್ತಗಿರಿ ವಾರೆಂಟ್ ಅನ್ನು ಹೊರಡಿಸಿತ್ತು. 

ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಡಾ. ಗಾನಾ ಪಿ. ಕುಮಾರ್ ಹಾಗೂ‌ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆರವರ ಮಾರ್ಗದರ್ಶನದಂತೆ ಠಾಣಾ ಉಪನಿರೀಕ್ಷಕರಾದ ಉದಯರವಿ ಎಂ.ವೈ., ಅಮೀನಸಾಬ ಎಂ. ಅತ್ತಾರ ಹಾಗೂ ಸಿಬ್ಬಂದಿಯಾದ ಹೆಚ್ ಸಿ ಅದ್ರಾಮ್ ಮತ್ತು ಪ್ರವೀಣ್ ರೈಯವರು ಆರೋಪಿಯನ್ನು ಕೇರಳ ರಾಜ್ಯದ ಕಣ್ಣೂರ ಎಂಬಲ್ಲಿ ಪತ್ತೆ ಮಾಡಿದ್ದಾರೆ. ಇದೀಗ ಆತನನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Ads on article

Advertise in articles 1

advertising articles 2

Advertise under the article