-->
ಪ್ರತಿ ಬಾರಿ ಕೆನ್ನೆಗೆ ಬಾರಿಸಲೆಂದು ಮಹಿಳಾ ಉದ್ಯೋಗಿಯನ್ನು ನೇಮಿಸಿದ ಉದ್ಯಮಿ: ಕಾರಣ ಏನು ಗೊತ್ತೇ?

ಪ್ರತಿ ಬಾರಿ ಕೆನ್ನೆಗೆ ಬಾರಿಸಲೆಂದು ಮಹಿಳಾ ಉದ್ಯೋಗಿಯನ್ನು ನೇಮಿಸಿದ ಉದ್ಯಮಿ: ಕಾರಣ ಏನು ಗೊತ್ತೇ?

ಭುವನೇಶ್ವರ್​: ಭಾರತ ಮೂಲದ ಅಮೆರಿಕಾ ಉದ್ಯಮಿ ಪವ್ಲಾಕ್​ ಕಂಪನಿಯ ಸಂಸ್ಥಾಪಕ ಮನೀಶ್​ ಸೇಥಿ ತಮ್ಮ ಕುರಿತಾದ ಆಸಕ್ತಿದಾಯಕ ವಿಚಾರವೊಂದನ್ನು ಬ್ಲಾಗ್ ನಲ್ಲಿ ಬರೆದು ಬಹಿರಂಗಪಡಿಸಿದ್ದಾರೆ. ಅವರು ಪ್ರತಿ ಬಾರಿ ಫೇಸ್​ಬುಕ್​ ನೋಡಿದಾಗಲೂ ತಮ್ಮ ಕೆನ್ನೆಗೆ ಬಾರಿಸಲೆಂದು ಮಹಿಳಾ ಉದ್ಯೋಗಿಯೊಬ್ಬರನ್ನು ನೇಮಿಸಿಕೊಂಡಿದ್ದರಂತೆ. 

ಮನೀಶ್ ಸೇಥಿ ಅವರ ಪವ್ಲಾಕ್​ ಕಂಪನಿಯು ಸುಲಭವಾಗಿ ಧಾರಣೆ ಮಾಡಬಹುದಾದಂತಹ ಸಾಧನಗಳನ್ನು ತಯಾರಿಕೆ ಮಾಡುತ್ತದೆ. ಅವರು ತಮ್ಮ ಕಂಪನಿಯ ಉತ್ಪಾದಕಾ ಸಾಮರ್ಥ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರಯೋಗ​ವಾಗಿ ಇದನ್ನು ಕಾರ್ಯಗತಗೊಳಿಸಿದ್ದಾರೆಂದು ಹೇಳಿಕೊಂಡಿದ್ದಾರೆ.



ತಮ್ಮ ಕೆಲಸದ ಸಂದರ್ಭ ಫೇಸ್​ಬುಕ್​ಗೆ ಲಾಗಿನ್​ ಆದಲ್ಲಿ ಕಪಾಳಕ್ಕೆ ಬಾರಿಸಿ, ಎಚ್ಚರಿಸುವಂತಹ ಉದ್ಯೋಗಿಯೊಬ್ಬರ ಹುಡುಕಾಟಕ್ಕಾಗಿ 2012ರಲ್ಲಿ ಕ್ರೈಸ್ಟ್ ಲೀಗ್ ಕಂಪೆನಿಗೆ ಭೇಟಿ ನೀಡಿದ್ದರು. ಭೇಟಿಯ ಬಳಿಕ ಅವರು ಯುವತಿಯೊಬ್ಬರನ್ನು ಆಯ್ಕೆ ಮಾಡಿದರು. ಕೆಲಸ ಮಾಡುವ ಸಂದರ್ಭ ಫೇಸ್​ಬುಕ್​ ಲಾಗ್ ಇನ್ ಆದಲ್ಲಿ ಕೆನ್ನೆಗೆ ಬಾರಿಸುವುದಷ್ಟೇ ಆಕೆಯ ಕೆಲಸವಾಗಿತ್ತು. 

ಈ ವಿಚಾರವನ್ನು ತಮ್ಮ ಬ್ಲಾಗ್​ ಮೂಲಕ ಮನೀಷ್ ಸೇಥಿ ವಿವರಿಸಿದ್ದು, ಈ ಪ್ರಯೋಗದ ಫಲಿತಾಂಶ ನಿಜಕ್ಕೂ ಬೆರಗು ಮೂಡಿಸಿದೆ ಎಂದಿದ್ದಾರೆ. ಇದಕ್ಕಾಗಿ ಅವರು ಗಂಟೆಗೆ 8 ಡಾಲರ್​ (594 ರೂ.)ನಂತೆ ಕಾರಾ ಎಂಬ ಮಹಿಳೆಯನ್ನು ನೇಮಕ ಮಾಡಿದ್ದಾರಂತೆ. 

ಇದರಿಂದ ತನ್ನ ಉತ್ಪಾದಕತೆ ರಾಕೇಟ್​ ವೇಗದಲ್ಲಿ ಶೇ.98 ರಷ್ಟು ಬೆಳೆಯಿತು ಎಂದಿದ್ದಾರೆ. ಮನೀಷ್ ಸೇಥಿ ಅವರ ಕೆನ್ನೆಗೆ ಕಾರಾ ಬಾರಿಸುತ್ತಿರುವ ಫೋಟೋವೊಂದು ಇತ್ತೀಚೆಗೆ ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಆಗಿದ್ದು, ಭಾರೀ ವೈರಲ್​ ಆಗುತ್ತಿದೆ. ಟೆಸ್ಲಾ ಮತ್ತು ಸ್ಪೇಸ್​ ಎಕ್ಷ್​ ಕಂಪನಿಯ ಸಿಇಒ ಎಲನ್​ ಮಸ್ಕ್​ ವೈರಲ್​ ಫೋಟೋಗೆ ಎಡರು ಫೈಯರ್​ ಎಮೋಜಿ ಮೂಲಕ ಪ್ರತಿಕ್ರಿಯಿಸಿದ್ದಾರೆ. 

Ads on article

Advertise in articles 1

advertising articles 2

Advertise under the article