
Medhya Kottary- ಬಾಲ ಪ್ರತಿಭೆ ಮೇಧ್ಯಾ ಕೊಟ್ಟಾರಿಗೆ ಕರ್ನಾಟಕ ರಾಜ್ಯೋತ್ಸವ ಸಾಧಕ ಪುರಸ್ಕಾರ
Thursday, November 11, 2021
ಬಾಲ ಪ್ರತಿಭೆ ಮೇಧ್ಯಾ ಕೊಟ್ಟಾರಿಗೆ ಕರ್ನಾಟಕ ರಾಜ್ಯೋತ್ಸವ ಸಾಧಕ ಪುರಸ್ಕಾರ
ಮಂಗಳೂರು: ಮಂಗಳೂರಿನ ಬಹುಮುಖ ಪ್ರತಿಭೆ ಮಂಗಳೂರು, ಅಶೋಕನಗರ, ಹೊೈಗೆಬೈಲ್ ನ ಮೇಧ್ಯಾ ಕೊಟ್ಟಾರಿ ಅವರಿಗೆ ಕರ್ನಾಟಕ ರಾಜ್ಯೋತ್ಸವ 'ಸಾಧಕ ಪುರಸ್ಕಾರ' ನೀಡಲಾಗಿದೆ.
ಮಂಗಳೂರಿನ ಕಲ್ಕೂರು ಪ್ರತಿಷ್ಟಾನ ವತಿಯಿಂದ ಈ ಗೌರವ ಪುರಸ್ಕಾರ ನೀಡಲಾಯಿತು.
ಮೇಧ್ಯಾ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ “ಸಾಧಕ ಪುರಸ್ಕಾರ” ನೀಡಿ ಗೌರವಿಸುವ ಕಾರ್ಯಕ್ರಮ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆಯಿತು.
ಮೇಧ್ಯಾ ಮಂಗಳೂರಿನ ನ್ಯಾಯವಾದಿ ಚಂದ್ರಹಾಸ ಕೊಟ್ಟಾರಿ ಹಾಗೂ ಪ್ರೇಮಲತಾ ದಂಪತಿಯ ಪುತ್ರಿಯಾಗಿದ್ದಾರೆ.